Ad imageAd image

543 ಲೋಕಸಭಾ ಸ್ಥಾನಗಳ ಸಂಖ್ಯೆ 816 ಕ್ಕೆ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ : ರಾಜ್ಯಕ್ಕೆ 42 ಸ್ಥಾನ

Bharath Vaibhav
543 ಲೋಕಸಭಾ ಸ್ಥಾನಗಳ ಸಂಖ್ಯೆ 816 ಕ್ಕೆ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ : ರಾಜ್ಯಕ್ಕೆ 42 ಸ್ಥಾನ
WhatsApp Group Join Now
Telegram Group Join Now

ನವದೆಹಲಿ: ದೇಶದ ರಾಜಕೀಯ ಭೂಪಟದಲ್ಲಿ ಮಹತ್ತರ ಬದಲಾವಣೆ ಗಾಳಿ ಬೀಸುವ ಸಾಧ್ಯತೆ ಇದೆ. ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 816 ಕ್ಕೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಈ ಕುರಿತದ ಸಾಂವಿಧಾನಿಕ ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ.

2011ರ ಜನಗಣತಿ ಆಧರಿಸಿ ಕ್ಷೇತ್ರಗಳ ಮರ ವಿಂಗಡಣೆ ಪ್ರಕ್ರಿಯೆ ನಡೆದಲ್ಲಿ ಕರ್ನಾಟಕದ ಹಾಲಿ ಸಂಸದರ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗಲಿದೆ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತಿದ್ದುಪಡಿ ಕೂಡ ಈ ವಿಧೇಯಕದ ಭಾಗವಾಗಲಿದೆ.

2029ರ ಚುನಾವಣೆಗೆ ಮೊದಲು ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎಲ್ಲಾ ಪಕ್ಷಗಳ ಸಹಮತದೊಂದಿಗೆ ಮಹತ್ವದ ತಿದ್ದುಪಡಿ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕರ್ನಾಟಕದ ಈಗಿರುವ 28 ಲೋಕಸಭಾ ಸದಸ್ಯ ಸ್ಥಾನಗಳು 42ಕ್ಕೆ ಏರಿಕೆಯಾಗಲಿವೆ. ತಮಿಳುನಾಡು 39 ರಿಂದ 59, ಕೇರಳ 20 ರಿಂದ 30, ಆಂಧ್ರ ಪ್ರದೇಶ 25 ರಿಂದ 38, ಮಹಾರಾಷ್ಟ್ರ 48 ರಿಂದ 72 ಸಂಸದರ ಸ್ಥಾನಗಳನ್ನು ಹೊಂದುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!