ಯಳಂದೂರು: ಚಾಮರಾಜನಗರ.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಯರಿಯೂರು ಸಿ. ರಾಜಣ್ಣ ರವರ 54 ಹುಟ್ಟುಹಬ್ಬವನ್ನು ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.
ಈ ವೇಳೆ ಶಿಕ್ಷಕರಾದ ಮದ್ದೂರು ಉಮಾಶಂಕರ್ ರವರು ಮಾತನಾಡಿ ಈ ದಿನ ಚಾಮರಾಜನಗರ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಯರಿಯೂರು ಸಿ. ರಾಜಣ್ಣ ರವರ ಹುಟ್ಟುಹಬ್ಬವನ್ನು ಅಂಬೇಡ್ಕರ್ ಪ್ರತಿಮೆಯ ಮುಂಭಾಗ ಬುದ್ಧ ಪ್ರಿಯ ಅಶೋಕ ಚಾರಿಟೇಬಲ್ ಟ್ರಸ್ಟ್ವತಿಯಿಂದ ಆಚರಿಸಲಾಯಿತು. ನಮ್ಮ ಸಮುದಾಯದ ಹಿರಿಯ ಮುಖಂಡರಾದ ರಾಜಣ್ಣ ರವರಿಗೆ ಬುದ್ಧ, ಬಸವ, ಅಂಬೇಡ್ಕರ್ ರವರ ಆಶಿರ್ವಾದ ಸದಾ ಇರಲಿ, ಸಮಾಜಕ್ಕಾಗಿ ಇನ್ನು ಹಲವಾರು ವರ್ಷ ತಮ್ಮ ಸೇವೆ ಸಲ್ಲಿಸಿ ಹೋರಾಟ ಗಳನ್ನು ನಡೆಸಲಿ ಎಂದು ಶುಭ ಕೋರಿದರು..
ಇದೆ ವೇಳೆ ಬಿ ವಿ 5 ನ್ಯೂಸ್ ಹಾಗೂ ಭಾರತ ವೈಭವ ದಿನಾ ಪತ್ರಿಕೆ ಜಿಲ್ಲಾ ಕಛೇರಿಯಲ್ಲೂ ಹುಟ್ಟುಹಬ್ಬ ಆಚರಿಸಲಾಯಿತು
ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ರಾಜಣ್ಣ ಮಾತನಾಡಿದರು
ಈ ಸಂದರ್ಭದಲ್ಲಿ ವೈ. ಕೆ. ಮೋಳೆ ನಂಜುಂಡ, ಬಿ ವಿ 5 ನ್ಯೂಸ್ ಹಾಗೂ ಭಾರತ ವೈಭವ ಪತ್ರಿಕೆ ವಾರದಿಗಾರರದ ಸ್ವಾಮಿ ಬಳೇಪೇಟೆ,ಡಿ. ಎಸ್. ಎಸ್ ನ ಚಾಮರಾಜನಗರ ತಾಲ್ಲೂಕು ಸಂಚಾಲಕರಾದ ಗೂಳಿಪುರ ಅನಿಲ್ ಕುಮಾರ್,ಯಳಂದೂರು ತಾಲ್ಲೂಕು ತಾಲ್ಲೂಕು ಸಂಚಾಲಕ ಚಂದ್ರಶೇಖರ್,ಯರಗಂಬಳ್ಳಿ ಮಲ್ಲು, ರಾಜು ವೈ ಕೆ ಮೋಳೆ,ದೊಡ್ಡರಾಜು, ಪದ್ಮನಾಬಾ, ದುಗ್ಗಹಟ್ಟಿ ಮಾದೇಶ್,ಕೃಷ್ಣ ರಾಜ್, ಚಲುವರಾಜ್, ವರದರಾಜ್, ಸೇರಿದಂತೆ ಇತರರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ