ಸೇಡಂ: ತಾಲೂಕಿನ ರಂಜೋಳ ಗ್ರಾಮದ ಬಸ್ ನಿಲ್ದಾಣವು ಸಂಪೂರ್ಣ ದುರ್ಬಳಕೆಗೆ ಒಳಗಾಗಿದೆ.
ಬಸ್ ನಿಲ್ದಾಣ ಪ್ರಯಾಣಿಕರ ಸಲುವಾಗಿಯೇನ ಅಥವಾ ಇನ್ನಿತರ ಸ್ವಂತ ಪ್ರಯೋಜನೆಗಳಿಗೆ ಇದೆಯೆ ಎಂಬ ಪ್ರಶ್ನೆ ಜನರಲ್ಲಿ ಮೂಡಿ ಬರುತ್ತಿದೆ. ಬೇಸಿಗೆ ಕಾಲ ಶುರುವಾಗಿದೆ. ಬೇರೆ ಊರಿನಿಂದ ಬಂದ ಜನರು ಬಸ್ ಗಾಗಿ ಕಾಯಬೇಕಾದರೆ ಬಿಸಿಲಲ್ಲಿ ನಿಲ್ಲುವ ಪರಿಸ್ಥಿತಿ ಗ್ರಾಮದಲ್ಲಿ ಉಂಟಾಗಿದೆ.
ಬಸ್ ನಿಲ್ದಾಣದ ಒಳಗಡೆ, ಮಣ್ಣು, ಕಲ್ಲು, ಬಟ್ಟೆ, ಸೇರಿದಂತೆ ಅನೇಕ ರೀತಿಯ ವಸ್ತುಗಳು ಅದರಲ್ಲಿ ತುಂಬಿದರೆ.
ಸರ್ಕಾರದ ಜಾಗವನ್ನು ದುರ್ಬಳಕೆ ಮಾಡುತ್ತಿದ್ದಾರೆ ಇಲ್ಲಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರು ಹಾಗೂ ಅಧ್ಯಕ್ಷರು ಕಣ್ಣುಮುಚ್ಚಿ ಕೂತಿರುವರ ಅಥವಾ ಇದರಲ್ಲಿ ಅವರ ಕೈವಾಡ ಏನಾದರೂ ಇದೆಯೇ ಎಂಬ ಅನುಮಾನಗಳು ಉಂಟಾಗುತ್ತಿವೆ.
ಸ್ವಲ್ಪ ಕೂಡ ಸ್ವಚ್ಚತೆ ಇಲ್ಲ, ಸಾರ್ವಜನಿಕ ಸ್ಥಳಗಳಿಗೆ ಜವಾಬ್ದಾರಿಯುತ ಅಧಿಕಾರಿಗಳು ಗಮನ ಕೊಡುತ್ತಿಲ್ಲ.
ಒಂದು ಗ್ರಾಮದ ಬಸ್ ನಿಲ್ದಾಣವು ಇತರ ಇದ್ದರೆ ಗ್ರಾಮಸ್ಥರಿಗೆ ಅಷ್ಟೇ ಅಲ್ಲ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ದಿನವಿಡೀ ಓಡಾಡುವ ಜನರಿಗೆ ತುಂಬಾನೇ ತೊಂದರೆ ಆಗುತ್ತಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಆಗ್ರಹ ವ್ಯಕ್ತಪಡಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್