ಬಾಗಲಕೋಟ: ಜಿಲ್ಲೆಯ ಬಾದಾಮಿ ತಾಲೂಕ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಡ್ಡರ ಓಣಿ ಬಾದಾಮಿ ಯಲ್ಲಿ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ.
ಕಾರ್ಯಕ್ರಮ ಪ್ರಾರಂಭದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಿದರು. ಶ್ರೀ ಶಿವ ಪೂಜಾ ಶಿವಾಚಾರ್ಯ ಸ್ವಾಮಿಗಳು,ನವಗ್ರಹ ಹಿರೇಮಠ ರವರ ಸಾನಿಧ್ಯವಹಿಸಿದ್ದರು.ಎಸ್. ಡಿ. ಎಮ್, ಸಿ ಅಧ್ಯಕ್ಷರು ಆದ ಪರಶುರಾಮ್ ಚೋಳಚಗುಡ್ಡ. ಹಾಗೂ ಉಪಾಧ್ಯಕ್ಷರು ಶ್ರೀಮತಿ ಬಸಮ್ಮ ಸಂಗನಾಳ, ಚೆನ್ನಪ್ಪ ಚಳಗೇರಿ ಹಾಗೂ ಶಾಲೆಯ ಮುಖ್ಯ ಗುರುಗಳು ವಿ, ಎಸ್, ಶೆಟ್ಟರ್, ಹಾಗೂ ಶ್ರೀಮತಿ ಭಾರತಿ ದರಮನ್ನವರ್, ಇನ್ನು ಕಾರ್ಯಕ್ರಮ ಆಗಮಿಸಿದ ಗಣ್ಯರು, ಮಕ್ಕಳ ಪಾಲಕರು, ಶಾಲೆಯ ಆಡಳಿತ ಮಂಡಳಿ, ಎಸ್, ಡಿ, ಎಮ್, ಸಿ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.ನಂತರ ಶಾಲಾ ಮಕ್ಕಳು ತಮ್ಮ ತಮ್ಮ ತಂದೆ ತಾಯಿಗಳ ಪಾದಪೂಜೆ ಮಾಡಿ ಕಾರ್ಯಕ್ರಮ ನಡೆಸಿದರು. ನಂತರ ಮಕ್ಕಳ ಸಂತೆ ಕಾರ್ಯಕ್ರಮ. ಪಾಲಕರು ಮಕ್ಕಳು ನಡೆಸುತ್ತಿದ್ದ ಮಕ್ಕಳ ಸಂತೆ ಕಾರ್ಯಕ್ರಮ ದಲ್ಲಿ ಇಂದಿನ ಮಾರುಕಟ್ಟೆ, ದಿನ ನಿತ್ಯ ಬಳಕೆಯ ವಸ್ತುಗಳ ಖರೀದಿ ಹಾಗೂ ಮಾಹಿತಿ ಪಡೆದುಕೊಂಡು ಪಾಲಕರು ಸಂತಸ ಪಟ್ಟರು. ಈ ಕಾರ್ಯಕ್ರಮ ಎಲ್ಲರೂ ಸೇರಿ ಯಶಸ್ವಿ ಗೊಳಿಸಿದರು.
ವರದಿ. ಎಸ್. ಎಸ್. ಕವಲಾಪುರಿ




