ಮಹಾರಾಷ್ಟ್ರ : ಬೆಂಗಳೂರಿನ ನೆಲಮಂಗಲದಲ್ಲಿ ಶನಿವಾರ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದು, ಇದೀಗ ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿತು.
ಬೆಂಗಳೂರಿನ ನೆಲಮಂಗಲದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೇನರ್ ಬಿದ್ದು, ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ ಮೂಲಕ ತಲುಪಿದೆ.
ಇದೀಗ ಸ್ವಗ್ರಾಮದಲ್ಲಿ ಎಲ್ಲರ ಸಮ್ಮುಖ ಲಿಂಗಯುತ ಸಮುದಾಯದಂತೆ ಅಂತ್ಯಕ್ರಿಯೆ ನಡೆದಿದ್ದು, ಮೃತ ಚಂದ್ರಮ್ ಅವರ ಸಹೋದರ ಅಗ್ನಿಸ್ಪರ್ಶ ಮಾಡಿದ್ದಾರೆ. ಸ್ವಗ್ರಾಮ ನೀರವ ಮೌನ ಆವರಿಸಿದೆ.