ಸಿಎಂ ಮುಂದೆ ಶರಣಾದ 6 ನಕ್ಸಲರು : 3 ಲಕ್ಷ ರೂ. ಸಹಾಯಧನ ಬಿಡುಗಡೆ 

Bharath Vaibhav
WhatsApp Group Join Now
Telegram Group Join Now

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮುಂದೆ ಮೋಸ್ಟ್ ವಾಂಟೆಂಡ್ 6 ನಕ್ಸಲರು ಶರಣಾಗತರಾಗಿದ್ದರು. ಹೀಗೆ ಶರಣಾದಂತ ಆರು ನಕ್ಸಲರಿಗೆ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ತಲಾ 3 ಲಕ್ಷ ಸಹಾಯಧನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.

ಈ ಸಂಬಂಧ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮಂಜೂರಾತಿ ಆದೇಶ ಹೊರಡಿಸಿದ್ದಾರೆ. ದರಲ್ಲಿ ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯಡಿಯಲ್ಲಿ ನಕ್ಸಲ್ ಚಟುವಟಿಕೆಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಶರಣಾಗತರಾದವರನ್ನು ಸರ್ಕಾರದಿಂದ ಘೋಷಣೆಯಾಗಿರುವ ಸೌಲಭ್ಯಗಳನ್ನು ಒದಗಿಸಲು ಉಲ್ಲೇಖ(1) ರ ಸರ್ಕಾರದ ಆದೇಶದಲ್ಲಿ ನಿರ್ದೇಶಿಸಲಾಗಿರುತ್ತದೆ ಎಂದಿದ್ದಾರೆ.

ದಿನಾಂಕ:6-01-2025 ರಂದು ರಾಜ್ಯದ ಭೂಗತ ನಕ್ಸಲರಾದ 1)ಮುಂಡಗಾರು ಲತಾ 2) ಸುಂದರಿ ಕುತ್ತಲೂರು 3)ವನಜಾಕ್ಷಿ ಬಾಳೆಹೊಳೆ 4) ಮಾರೆಪ್ಪ ಆರೋಟಿ 5) ಕೆ.ವಸಂತ 6) ಟಿ.ಎನ್.ಜಿಷಾ ಇವರುಗಳು ಎಡಪಂಥೀಯ ತೀವುಗಾಮಿಗಳ ಶರಣಾಗತಿ ಮತ್ತು ಪುನರ್ ವಸತಿ ಯೋಜನೆಯ ರಾಜ್ಯ ಮಟ್ಟದ ನಕ್ಸಲ್ ಶರಣಾಗತ ಸಮಿತಿಯ ಮುಂದೆ ಮುಖ್ಯವಾಹಿನಿಗೆ ಶರಣಾಗತರಾಗಿರುತ್ತಾರೆ.

ಅದರಂತೆ ಇವರುಗಳ ಶರಣಾಗತ ಅರ್ಜಿಯನ್ನು ಅನುಮೋದಿಸಿ ಅಂಗೀಕರಿಸಲು ಹಾಗೂ ಪುವರ್ಗ “ಎ” ಅಡಿಯಲ್ಲಿನ ಶರಣಾಗತರಾಗಲು ಒಪ್ಪಿರುವ ನಕ್ಸಲರಿಗೆ ರೂ.3.00 ಲಕ್ಷಗಳನ್ನು ಹಾಗೂ ಪವರ್ಗ “ಬಿ” ಅಡಿಯಲ್ಲಿನ ಶರಣಾಗತರಿಗೆ ರೂ.3.00 ಲಕ್ಷಗಳನ್ನು ಸರ್ಕಾರದ ವತಿಯಿಂದ ನೀಡಲು ರಾಜ್ಯ ಸಮಿತಿಯಲ್ಲಿ ತೀರ್ಮಾನಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದು 1)ಮುಂಡಗಾರು ಲತಾ 2) ಸುಂದರಿ ಕುತ್ತಲೂರು 3)ವನಜಾಕ್ಷಿ ಬಾಳೆಹೊಳ 4) ಮಾರೆಪ್ಪ ಆರೋಟಿ 5) ಕೆ.ವಸಂತ 6) ಟಿ.ಎನ್.ಜಿಷಾ ಇವರುಗಳ ಔಪಚಾರಿಕ ಶರಣಾಗತಿಯನ್ನು ಅಂಗೀಕರಿಸಿ ಆದೇಶ ಹೊರಡಿಸಲು ಚಿಕ್ಕಮಗಳೂರು ಜಿಲ್ಲಾ ಸಮಿತಿಗೆ ತಿಳಿಸಲು ತೀರ್ಮಾನಿ ಚಿಕ್ಕಮಗಳೂರು ಜಿಲ್ಲೆಯ ನಕ್ಸಲ್ ಶರಣಾಗತಿ/ ಪುನರ್ ವಸತಿ ಸಮಿತಿಯು ಮುಂದಿನ ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶಿಸಲಾಗಿರುತ್ತದೆ ಎಂದಿದೆ.

ಸರ್ಕಾರದ ಉಲ್ಲೇಖ(2) ರ ನಿರ್ದೇಶನದಂತೆ ದಿನಾಂಕ:08-01-2025 ರಂದು ಎಡಪಂಥೀಯ ತೀವ್ರಗಾಮಿಗಳ ಶರಣಾಗತಿ ಮತ್ತು ಪುನರ್‌ ವಸತಿಯ ಜಿಲ್ಲಾ ಸಮಿತಿ ಸಭೆಯನ್ನು ನಡೆಸಲಾಗಿದ್ದು, ಸದರಿ ಸಭೆಯಲ್ಲಿ ಸರ್ಕಾರದ ನಿರ್ದೇಶನದಂತೆ ಕ್ರಮವಹಿಸುವುದು ಅಗತ್ಯವಾಗಿರುತ್ತದೆಂದು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದೆ.

ಆದ್ದರಿಂದ ಉಲ್ಲೇಖ (1) ರ ಸರ್ಕಾರದ ಯೋಜನೆಯಂತೆ ಹಾಗೂ ಉಲ್ಲೇಖ (2) ರ ನಿರ್ದೇಶನದಂತೆ ಈ ಕೆಳಕಂಡ ಶರಣಾಗತರಿಗೆ ಮೊದಲನೆ ಹಂತದಲ್ಲಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಜಮೆಯಾಗಿ ಬಾಕಿ ಉಳಿದಿರುವ ಪರಿಹಾರ ನಿಧಿಯಿಂದ ಈ ಕೆಳಕಂಡಂತೆ ಪ್ರೋತ್ಸಾಹಧನವನ್ನು ಮಂಜೂರು ಮಾಡಿ ಆದೇಶಿಸಿದ್ದಾರೆ.

ಮುಂಡಗಾರು ಲತಾ – 3 ಲಕ್ಷ

ಸುಂದರಿ ಕುತ್ತಲೂರು – 3 ಲಕ್ಷ

ವನಜಾಕ್ಷಿ ಬಾಳೆಹೊಳೆ – 3 ಲಕ್ಷ

ಮಾರೆಪ್ಪ ಆರೋಟಿ – 3 ಲಕ್ಷ

ಕೆ.ವಸಂತ – 3 ಲಕ್ಷ

ಜಿಷಾ – 3 ಲಕ್ಷ

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!