————————————————————–ಸಿರಾಜ್- ಪ್ರಸಿದ್ಧ ದಾಳಿಗೆ ತತ್ತರಿಸಿದ ಇಂಗ್ಲೆಂಡ್
ಲಂಡನ್: ಮೊಹ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ಮಾರಕ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆದ ಐದನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯವನ್ನು 6 ರನ್ ಗಳಿಂದ ಗೆದ್ದು ಐದು ಟೆಸ್ಟ್ ಗಳ ಸರಣಿಯನ್ನು 2-2 ರಿಂದ ಸಮ ಮಾಡಿಕೊಂಡಿತು.

ಇಲ್ಲಿನ ಕೆನಿಂಗ್ಟನ್ ಓವೆಲ್ ಮೈದಾನದಲ್ಲಿ ಐದನೇ ಹಾಗೂ ಕೊನೆಯ ದಿನವಾದ ಇಂದು ಬೆಳಗಿನ ಒಂದು ಘಂಟೆ ಆಟದಲ್ಲಿಯೇ ಈ ಫಲಿತಾಂಶ ಹೊರ ಬಿದ್ದಿದೆ. ಐದನೇ ದಿನದ ಆಟ ಆರಂಭವಾದಾಗ ಇಂಗ್ಲೆಂಡ್ ಗೆ ಗೆಲ್ಲಲು 35 ರನ್ ಗಳ ಅಗತ್ಯವಿದ್ದರೆ, ಭಾರತಕ್ಕೆ 4 ವಿಕೆಟ್ ಗಳ ಅಗತ್ಯವಿತ್ತು. ಈ ಪೈಕಿ ಇಂದಿನ ಆಟದಲ್ಲಿ ಮೊಹ್ಮದ್ ಸಿರಾಜ್ ಮೂರು ವಿಕೆಟ್ ಗಳನ್ನು ಪಡೆದರೆ, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಪಡೆದರು. ಹೀಗಾಗಿ ಸಿರಾಜ್ 104 ರನ್ ನೀಡಿ 5 ವಿಕೆಟ್ ಪಡೆದರು. ಪ್ರಸಿದ್ಧ ಕೃಷ್ಣ 126 ಕ್ಕೆ 4 ವಿಕೆಟ್ ಪಡೆದರು.
ಸ್ಕೋರ್ ವಿವರ
ಭಾರತ 224 ಹಾಗೂ 396
ಇಂಗ್ಲೆಂಡ್ 247 ಹಾಗೂ 367




