Ad imageAd image

ಕಾಶಿಗೆ ತೆರಳುವಾಗ ಭೀಕರ ಅಪಘಾತ : ಬೀದರ್​’ನ ಒಂದೇ ಕುಟುಂಬದ 6 ಮಂದಿ ದುರಂತ ಸಾವು

Bharath Vaibhav
ಕಾಶಿಗೆ ತೆರಳುವಾಗ ಭೀಕರ  ಅಪಘಾತ : ಬೀದರ್​’ನ ಒಂದೇ ಕುಟುಂಬದ 6 ಮಂದಿ ದುರಂತ ಸಾವು
WhatsApp Group Join Now
Telegram Group Join Now

ಉತ್ತರ ಪ್ರದೇಶ : ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಸಮೀಪದ ಕಾಶಿಗೆ ತೆರಳುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್​ ಮೂಲದ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ.

ಮೃತರನ್ನು ಸುನೀತಾ (35), ಸಂತೋಷ್ (43), ನೀಲಮ್ಮ (60), ಗಣೇಶ ಹಾಗೂ ಶಿವು ಗುರುತಿಸಲಾಗಿದೆ.ಈ ಅವಘಡದಲ್ಲಿ ಒಂದು ಮಗು ಕೂಡ ಮೃತಪಟ್ಟಿದೆ.

ಬೀದರ್​ನಿಂದ ಪ್ರಯಾಗ್​ರಾಜ್​ಗೆ ಕ್ರೂಸರ್​ನಲ್ಲಿ 14 ಜನ ತೆರಳಿದ್ದರು. ಕುಂಭಮೇಳವನ್ನು ಮುಗಿಸಿಕೊಂಡು ಕಾಶಿ ಕಡೆಗೆ ತೆರಳುತ್ತಿದ್ದ ವೇಳೆ ಮಿರಾಜ್ ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ.

ಮೃತರು ಬೀದರ್​ನ ಲಾಡಗೇರಿ ಬಡಾವಣೆಯ ನಿವಾಸಿಗಳು. ಅಪಘಾತದಲ್ಲಿ ಏಳು ಜನ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

WhatsApp Group Join Now
Telegram Group Join Now
Share This Article
error: Content is protected !!