ನಿಪ್ಪಾಣಿ : ಭೋಜ ವಿವಿಧೋದ್ದೇಶ ಪ್ರಾಥಮಿಕ ಸಂಘಕ್ಕೆ 65 ಲಕ್ಷ 81ಸಾವಿರ ರೂ. ಲಾಭ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಡಾ. ಸುದರ್ಶನ ಮೂರಾಬಟ್ಟೆಯವರಿಂದ ಮಾಹಿತಿ.
ಮಿತ ಖರ್ಚು, ಪಾರದರ್ಶಕ ಆಡಳಿತ, ಗ್ರಾಹಕರಿಗೆ ಸಕಾಲಕ್ಕೆ ಸೇವೆ, ಒದಗಿಸುವುದರೊಂದಿಗೆ ನಿರಂತರ ಸಂಸ್ಥೆಯ ಅಭಿವೃದ್ಧಿಗೆ ಆಡಳಿತ ಮಂಡಳಿ ಶ್ರಮಿಸಿದ್ದರಿಂದ ನಿಪ್ಪಾಣಿ ತಾಲೂಕಿನ ಭೋಜ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಕಳೆದ ಆರ್ಥಿಕ ವರ್ಷದಲ್ಲಿ 65 ಲಕ್ಷ 81ಸಾವಿರ ರೂಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ 18ರಷ್ಟು ಲಾಭಾಂಶ ನೀಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಡಾಕ್ಟರ್ ಸುದರ್ಶನ್ ಮೂರಾಬಟ್ಟೆ ತಿ ಳಿಸಿದರು. ಅವರು ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ವಾರ್ಷಿಕ ಸಭೆಯ ಪ್ರಾರಂಭದಲ್ಲಿ ರೈತ ಗೀತೆಯೊಂದಿಗೆ ಪ್ರಾರಂಭವಾಯಿತು ಕಳೆದ ಆರ್ಥಿಕ ವರ್ಷದಲ್ಲಿ ನಿಧನರಾದ ಸಂಘದ ಸದಸ್ಯರು ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತದನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ವೇಳೆ ಡಾ .ಸುದರ್ಶನ ಮೂರಾಬಟ್ಟೆ ವರದಿ ವಾಚನ ಮಾಡಿ ಸಂಘದ ಸಾಂಪತ್ತಿಗೆ ಸ್ಥಿತಿ ವಿವರಿಸಿದರು.

ರೈತರ ಆರ್ಥಿಕ ಅಭಿವೃದ್ಧಿಗಾಗಿ ಜಿಲ್ಲಾ ಬ್ಯಾಂಕಿನಿಂದ 17 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ವಿತರಿಸಿ ಗಡಿ ಭಾಗದಲ್ಲಿಯೇ ಶತಮಾನೋತ್ಸವದ ಮಾದರಿ ಸಂಘವಾಗಿದ್ದು ಸಂಘ 2576 ಸದಸ್ಯರನ್ನು ಹೊಂದಿದ್ದು 1ಕೋಟಿ 94ಲಕ್ಷ ರುಪಾಯಿ ಶೇರ್ ಬಂಡವಾಳ, 2 ಕೋಟಿ 55 ಲಕ್ಷ ರೂಪಾಯಿ ನಿಧಿ, 22ಕೋಟಿ 38 ಲಕ್ಷ ರುಪಾಯಿ ಠೇವು ಸಂಗ್ರಹಿಸಿದ್ದು 10 ಕೋಟಿ 18ಲಕ್ಷ ರೂಪಾಯಿ ಗುಂತಾವಣೆ ಮಾಡಿದ್ದಾರೆ. ವರ್ಷಾಂತ್ಯದಲ್ಲಿ ಸಂಘದ ಸದಸ್ಯರಿಗೆ 27 ಕೋಟಿ 63ಲಕ್ಷ ರುಪಾಯಿ ಸಾಲ ವಿತರಿಸಿ ಸಕಾಲಕ್ಕೆ ಮರುಪಾವತಿಸಿಕೊಂಡಿದ್ದರಿಂದ ಸಂಸ್ಥೆಗೆ 65 ಲಕ್ಷ 81ಸಾವಿರ ರುಪಾಯಿ ಲಾಭ ಬಂದಿದ್ದು ಸಂಘದ ಸದಸ್ಯರಿಗೆ ಶೇ 18ರಷ್ಟು ಲಾಭಾಂಶ ನೀಡಲಾಗುವುದು ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಜಗೌಡ ಪಾಟೀಲ್ ಲಾಬಹಾನಿ ಅಂದಾಜು ಪತ್ರಿಕೆ ಹಾಗೂ ಸಬೇ ಯ ಮುಂದಿನ ವಿಷಯಗಳನ್ನು ಮಂಡಿಸಿ ಸದಸ್ಯರಿಂದ ಮಂಜೂರಿ ಪಡೆದರು. ವಾರ್ಷಿಕ ಸಭೆಯಲ್ಲಿ ಜೈ ಕಿಸಾನ್ ರೈತ ಸಂಘಟನೆಯ ಅಧ್ಯಕ್ಷ ರಮೇಶ್ ಪಾಟೀಲ್ ಹಾಗೂ ಸದಸ್ಯರಿಂದ ರೈತರ ಪ್ರಮುಖ ಐದು ಬೇಡಿಕೆಗಳನ್ನು ವಾರ್ಷಿಕ ಸಭೆಯಲ್ಲಿ ಮಂಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಮನವಿ ಸಲ್ಲಿಸಲು ಕೋರಿದರು.

ಇದೇ ವೇಳೆ ಸಂಘದ ಎಲ್ಲಾ ಆಡಳಿತ ಮಂಡಳಿಯ ಸದಸ್ಯರಿಗೆ ರೈತ ಸಂಘಟನೆ ವತಿಯಿಂದ ಶಾಲ ಶ್ರೀಫಲ ನೀಡಿ ಸನ್ಮಾನಿಸಲಾಯಿತು. ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷೇ ರಂಜನಾ ಮುರಾಬಟ್ಟೆ ಸಂಚಾಲಕರಾದ ಪ್ರಶಾಂತ ಪಾಟಿಲ್ ಸಚಿನ ಕೆಸ್ತೆ, ಅಮೋಲ ಮುರಾಬಟ್ಟೆ ಚಂದ್ರಕಾಂತ ಪಾಟೀಲ್ ಸುನಿಲ್ ಪಾಟೀಲ್ ಭರತ್ ಗುರವ, ಇಂದ್ರಾಯಣಿ ಮಾನೆ ರಾಜೇಂದ್ರ ಮಾನೆ,ಅಶ್ವಿನಿ ಮಮದಾಪುರೆ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು. ರಾಜಗೌಡಾ ಪಾಟೀಲ ಸ್ವಾಗತಿಸಿದರು ಸಿಬ್ಬಂದಿ ಸಂಜಯ ಗಾವಡ ವಂದಿಸಿದರು.
ವರದಿ:ಮಹಾವೀರ ಚಿಂಚಣೆ




