ಸೇಡಂ: ತಾಲೂಕಿನ ಶೀಲಾರಕೋಟ್ ಗ್ರಾಮದ ಶ್ರೀ ರಾಮ ದೇವಸ್ಥಾನದಲ್ಲಿ ರಾಮ ನವಮಿ ನಿಮಿತ್ಯ ಸೀತ ರಾಮಚಂದ್ರ ಸ್ವಾಮಿಗಳ ಕಲ್ಯಾಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಕಾಶ್ ಜೋಶಿ ಅವರು ಶ್ರೀ ರಾಮಾಯಣ ಬಗ್ಗೆ ಕುರಿತು ಸೀತಾ ರಾಮಚಂದ್ರ ಕಲ್ಯಾಣ ಕುರಿತು ಭಕ್ತಿ ಪ್ರವಚನ ಹೇಳಿದರು. ಚಿನ್ನಾ ರಾಜು ಸ್ವಾಮಿ ಅವರು ಶ್ರೀ ಸೀತರಾಮಚಂದ್ರ ದಂಪತಿಗಳಿಗೆ ಸಂಪ್ರದಾಯದಂತೆ ಕಲ್ಯಾಣ ಮಹೋತ್ಸವದ ಪೂಜೆಯನ್ನು ನೆರವೇರಿಸಿದರು.
ತದನಂತರ ಅನ್ನದಾನ ಸೇವೆ ಮಾಡುವ ಮೂಲಕ ಕಾರ್ಯಕ್ರಮವನ್ನು ಮುಂದುವರೆಸಿದರು.ಈ ಸಂದರ್ಭದಲ್ಲಿ ಮೆದಕ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಡಾ.ಮಧುಸೂಧನ್ ರೆಡ್ಡಿ ಪಾಟೀಲ್, ಭೀಮ ರೆಡ್ಡಿ ಪಾಟೀಲ್, ಪುರೋಹಿತರಾದ ಪ್ರಕಾಶ್ ಜೋಶಿ, ನಾರಯಣ ಸ್ವಾಮಿ ಜೋಶಿ, ಚಿನ್ನಾ ರಾಜು ಸ್ವಾಮಿ, ಸೇರಿದಂತೆ ಇನ್ನಿತರರು ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್