ಶಿವಮೊಗ್ಗ: ಶಿವಮೊಗ್ಗ ಪಾಡಿಪುರ ಬಡಾವಣೆಯ ಮನೆಯೊಂದರ ನೀರಿನ ಹೊಟ್ಟೆಯಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆಯಾಗಿವೆ.
ಉರಗ ಸಂರಕ್ಷಕ ಸ್ನೇಕ್ ಕಿರಣ್ ಸತತ ಎರಡು ದಿನ ಕಾರ್ಯಾಚರಣೆ ನಡೆಸಿ ಎಲ್ಲ ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ.
ಕಾಶೀಪುರ ಬಡಾವಣೆಯ ವಶುವೈದ್ಯಕೀಯ ಕಾಲೇಜು ರಸ್ತೆಯ ಎಸ್.ಈಶ್ವರಯ್ಯ ಎಂಬುವರ ಮನೆಯ ನೀರಿನ ತೊಟ್ಟಿಯಲ್ಲಿ ಹಾವಿನ ಮರಿಗಳು ಪತ್ತೆಯಾಗಿವೆ.
ಶನಿವಾರ ನೀರಿನ ತೊಟ್ಟಿಯ ಸಮೀಪ ಹಾವಿನ ಮರಿಯೊಂದು ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ನೀರಿನ ಮೊಟ್ಟೆಯ ಬಾಗಿಲು ತೆರೆದು ಪರಿಶೀಲಿಸಿದಾಗ ನೀರಿನೊಳಗೆ ಸಾಕಷ್ಟು ಸಂಖ್ಯೆಯ ಹಾವಿನ ಮರಿಗಳು ಓಡಾಡುತ್ತಿರುವುದು ಕಂಡುಬಂದಿದೆ. ಇದರಿಂದ ಭಯಭೀತರಾದ ಕುಟುಂಬರು ಸ್ನೇಕ್ ಕಿರಣ್ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಭಾರೀ ಸಂಖ್ಯೆಯ ಹಾವಿನ ಮರಿಗಳಿದ್ದವು. ಶವಿವಾದವ 63 ಹಾವಿನ ಮರಿಗಳನ್ನು ರಕ್ಷಿಸಿದ್ದರು. ಭಾನುವಾರ ರಾತ್ರಿ ಮತ್ತೆ ಅದೇ ನೀರಿನ ಟ್ಯಾಂಕ್‌ನಲ್ಲಿ ಮತ್ತಷ್ಟು ಹಾವಿನ ಮರಿಗಳು ಕಂಡುಬಂದಿದ್ದವು.ಮತ್ತೆ ಸ್ಥಳಕ್ಕಾಗಮಿಸಿದ ತಿರಣ್ 6 ಹಾವಿನ ಮರಿಗಳನ್ನು ರಕ್ಷಿಸಿದ್ದಾರೆ. ನೀರು ಹಾವು ವಿಷರಹಿತ ವರ್ಗಕ್ಕೆ ಸೇರಿದ್ದಾಗಿದ್ದು, ಇವುಗಳು ಕಚ್ಚಿದರೂ ಯಾವುದೇ ಅಪಾಯವಾಗುವುದಿಲ್ಲ ಎಂದು ಕಿರಣ್ ತಿಳಿಸಿದರು.
ಹಾವಿನ ಮರಿಗಳನ್ನು ನಿರ್ಜನ ಪ್ರದೇಶದ ನೀರಿನ ಸೆಲೆಯಿರುವ ಸ್ಥಳದಲ್ಲಿ ಬಿಡಲಾಗಿದೆ. ಕಾರ್ಯಾಚರಣೆ ವೇಳೆ ಹಾವಿನ ಮರಿಗಳ ತಾಯಿ ಸುಳಿವು ಪತ್ತೆಯಾಗಿಲ್ಲ. ನಾವು ಏಕಕಾಲದಲ್ಲಿ ಇನ್ನೊಂದು ದೊಡ್ಡ ಪ್ರಮಾಣದ ಹಾವಿನ ಮರಿಗಳನ್ನು ರಕ್ಷಣೆ ಮಾಡಿದ್ದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದರು.