ಧಾರವಾಡ:ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ 69 ನೇಯ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಕರ್ನಾಟಕ ಜನಸೈನ್ಯ ಧಾರವಾಡ ಜಿಲ್ಲಾ ಘಟಕದಿಂದ ಆಚರಿಸಲಾಯಿತು.

ಧಾರವಾಡ ನಗರದ ಕರ್ನಾಟಕ ಮಹಾವಿದ್ಯಾಲಯದ ಆವರಣದ ಎದುರುಗಡೆ 69 ನೇಯ ಕನ್ನಡ ರಾಜ್ಯೋತ್ಸವವನ್ನು ಕನ್ನಡಾಂಬೆಯ ಭಾವಚಿತ್ರಕ್ಕೆ ನಮನ ಸಲ್ಲಿಸಿ ವಿಶೇಷವಾಗಿ ಅರಿಸಲಾಯಿತು.
ನಾಡು ನುಡಿ ರಕ್ಷಣೆ ನಮ್ಮ ದ್ಯೇಯ ಎಂಬ ದ್ಯೇಯವಣ್ಣಿಟ್ಟುಕೊಂಡು ಸಂಘಟನೆಯನ್ನು ಕಟ್ಟಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ಜನಸೈನ್ಯ ಸಂಘಟನೆ ಯಾವತ್ತಿಗೂ ಮುಂದೆ ಬಂದಿದೆ.
ಸಂಧರ್ಭದಲ್ಲಿ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷರಾದ ವಿನಾಯಕ ಗುಡ್ಡದಕೇರಿ,ಸಂಘದ ಪದಾಧಿಕಾರಿಗಳಾದ ರೋಹಿತ್, ಸೌರಭ, ಸಂತೋಷ, ರಾಜೇಶ್, ಸೋಮಶೇಖರ್, ಹರ್ಷವರ್ಧನ್, ಶಂಕರ್ ಹಾಗೂ ಎಲ್ಲಾ ಪದಾಧಿಕಾರಿಗಳು ಇದ್ದರು.
ವರದಿ: ನಿತೀಶ್ ಪಾಟೀಲ್




