ಸಿಂಧನೂರು : ನವೆಂಬರ್ 30 ನಗರದ ಸ್ತ್ರೀಶಕ್ತಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ,ದ ವತಿಯಿಂದ ತಾಲೂಕು ಅಧ್ಯಕ್ಷ ಸುರೇಶ್ ಗೊಬ್ಬರಕಲ್ ಹಾಗೂ ನಗರ ಘಟಕ ಅಧ್ಯಕ್ಷ ದಾವಲ್ ಸಾಬ್ ದೊಡ್ಮನಿ ಇವರ ನೇತೃತ್ವದಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ತಾಯಿನಾಡ ದೇವತೆ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಹಾಗೂ ಶಾಲಾ ಮಕ್ಕಳ ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು, ನಂತರ ಕಾರ್ಯಕ್ರಮದಲ್ಲಿ ನಗರ ಸಭೆಯ ಪೌರಕಾರ್ಮಿಕರಿಗೆ, ಸಾರ್ವಜನಿಕ ಆಸ್ಪತ್ರೆಯ ನರ್ಸ್ ಗಳಿಗೆ, ಹಾಗೂ108 ಆಂಬುಲೆನ್ಸ್ ಚಾಲಕರಿಗೆ ಮತ್ತು ಅನೇಕ ಸಾಧಕರಿಗೆ ಸನ್ಮಾನ ಮಾಡಲಾಯಿತು, ಹಾಗೂ ಜೂನಿಯರ್ ರಾಜ್ ಕುಮಾರ್ ಜೂ ವಿಷ್ಣವರ್ಧನ್ ಜೂ. ರವಿಚಂದ್ರನ್ ಇವರುಗಳ ಮೂಲಕ ಸಂಜೆ ಸಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪ. ಪ್ರೊ. ಸದಾನಂದ ಶರಣರು ಸಿದ್ಧಾಶ್ರಮ ಬಂಗಾರಿ ಕ್ಯಾಂಪ್, ಹಾಗೂ ಶ್ರೀ ಅಬ್ಬಾಸಲಿ ತಾತನವರು ಸುಕ್ಷೇತ್ರ ಗೋನಾಳು ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟನೆ ಹಂಪನಗೌಡ ಬಾದರ್ಲಿ ಶಾಸಕರು ವಹಿಸಿಕೊಂಡಿದ್ದರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಕೆ. ವಿರೂಪಾಕ್ಷಪ್ಪ ಮಾಜಿ ಸಂಸದರು ಹಾಗೂ ವೆಂಕಟರಾವ್ ನಾಡು ಗೌಡ್ರು ಮಾಜಿ ಸಚಿವರು ಮಾಲಾರ್ಪಣೆ ಮಾಡಿದರು ‘ಮೆರವಣಿಗೆ ಉದ್ಘಾಟನೆ ಬಸವನಗೌಡ ಬಾದರ್ಲಿ ಎಂಎಲ್ಸಿ ಹಾಗೂ ಕೆ. ಕರಿಯಪ್ಪ ಬಿಜೆಪಿ ಮುಖಂಡರು, ಉದ್ಘಾಟಿಸಿದರು, ಅಶೋಕ್ ಕುಮಾರ್ ಜೈನ್ ಕರವೇ ಜಿಲ್ಲಾಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ- ಡಾ.ಶಿವರಾಜ್ ಮಕ್ಕಳ ತಜ್ಞರು, ಡಾ. ಹನುಮಂತ ರೆಡ್ಡಿ ತಾಲೂಕ ವೈದ್ಯಾಧಿಕಾರಿ, ದುರುಗಪ್ಪ ಪಿ. ಐ. ನಗರ ಪೊಲೀಸ್ ಠಾಣೆ, ಎಂಡಿ. ಇಶಾಕ್ ಪಿಎಸ್ಐ.ಗ್ರಾಮೀಣ ಠಾಣಾ, ಸಿಂಧನೂರು. ಉಪಸ್ಥಿತಿ ಇದ್ದರು
ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ.ಸುರೇಶ್ ಗೊಬ್ಬರಕಲ್. ನಗರ ಘಟಕ ಅಧ್ಯಕ್ಷ. ದಾವಲ್ ಸಾಬ್ ದೊಡ್ಮನಿ. ನಗರ ಘಟಕ. ಗ್ರಾಮ ಘಟಕ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು
ವರದಿ: ಬಸವರಾಜ ಬುಕ್ಕನಹಟ್ಟಿ.