ಪಾವಗಡ: ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿಸಿದ ಮಾರ್ಗ ಮತ್ತು ತತ್ವಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣ ಸಾಧ್ಯವೆಂದು ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಎಚ್. ಪಿ. ವೆಂಕಟೇಶ್ ಹೇಳಿದರು.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜರುಗಿದ ಅವರ 136ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ವಿದ್ಯೆ ಎನ್ನುವುದು ಸಮಾಜದಲ್ಲಿ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಅಂಬೇಡ್ಕರ್ ಅವರು ಜೀವಂತ ಉದಾಹರಣೆ. ಅವರ ಆದರ್ಶಗಳು ಮತ್ತು ತತ್ವಗಳು ನಮಗೆ ಪ್ರೇರಣೆಯಾಗಬೇಕು. ಇಂತಹ ಸಂದರ್ಭಗಳಲ್ಲಿ ಜಾತಿ, ಪಕ್ಷಪಾತವನ್ನು ಮರೆಯಬೇಕು,” ಎಂದ ಅವರು, ಜನತೆಗೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ, ಪುರಸಭೆ ಅಧ್ಯಕ್ಷ ಪಿ.ಎಚ್. ರಾಜೇಶ್, ತಹಸೀಲ್ದಾರ್ ಡಿ.ಎನ್. ವರದರಾಜು, ಇಒ ಜಾನಕಿರಾಮ್, ಸಿಪಿಐ ಗಿರೀಶ್, ಪ್ರಾಧ್ಯಾಪಕ ನಾಗಭೂಷಣ್ ಬ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು ಎಂಕೆ ನಾರಾಯಣಪ್ಪ
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಮಾಂಜಿನಪ್ಪ ನವರು,ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ಮಲ್ಲಿಕಾರ್ಜುನ ರವರು,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಇಂದ್ರಣಮ್ಮ ,ತಾಲ್ಲೂಕು ವೈದ್ಯಾಧಿಕಾರಿ ಬಾಬು ರವರು,ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಕುಮಾರ್ ದಲಿತ ಸಂಘಟನೆ ಮುಖಂಡರುಗಳು. ವೆಟರ್ನರಿ ಉಗ್ರಪ್ಪ. ಎಸ್ ಹನುಮಂತರಾಪ್ಪ ಡಿಎಸ್ಎಸ್. ಸಿ ಕೆ ತಿಪ್ಪೇಸ್ವಾಮಿ. ಬಿಪಿ ಪೆದ್ದಣ್ಣ. ವಲ್ಲೂರು ನಾಗೇಶ್. ಡಿಜೆಎಸ್ ನಾರಾಯಣಪ್ಪ. M K ಹಳ್ಳಿ. ನರಸಿಂಹಪ್ಪ. ಪ್ರಸಾದ. ಇನ್ನೂ ಮುಂತಾದ ಮುಖಂಡರು ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಇದ್ದರು..
ವರದಿ: ಶಿವಾನಂದ