ಐನಾಪುರ : ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಶ್ರೀ ಧರಿದೇವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 6ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ ದಿ.22ರಂದು ಸಂಘದ ಕಛೇರಿಯಲ್ಲಿ ಜರುಗಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಾವಸಾಬ ಚೌಗಲಾ ಸಂಘವು ಪ್ರಸಕ್ತ ಸಾಲಿನಲ್ಲಿ 13.30 ಲಕ್ಷ ಲಾಭ ಗಳಿಸಿದ್ದು,ಶೇರು ಬಂಡವಾಳ 555000 ಠೇವಣಿ 2,88,97,778 ಕೋಟಿ, ಸಾಲ. 2,7633,801ಕೋಟಿ, ದುಡಿಯುವ ಬಂಡವಾಳ.
3,75,00,500 ಡಿವ್ಹಿಂಡ 15 % ವಿತರಿಸಲಾಗಿದೆ.ಸಂಘವು ಪ್ರಗತಿಪತ ವಾಗಿ ಸಾಗುತ್ತಿದ್ದು ಸಾಲ ಪಡೆದ ಸದಸ್ಯರು ತಾವು ಆರ್ಥಿಕವಾಗಿ ಸಬಲರಾಗಿ ಸರಿಯಾದ ಸಮಯಕೆ ಮರುಪಾವತಿ ಮಾಡಿ ಸಂಘದ ಏಳಿಗ್ಗೆ ಶ್ರಮಿಸಬೇಕೆಂದು ಹೇಳಿದರು.
ಯುವ ಧುರೀಣರಾದ ತಮಣ್ಣಾ ಪಾರಶೇಟ್ಟಿ ಉಪಸ್ಥಿತಿತರಾಗಿ ಮಾತನಾಡಿ ಸಂಘವು ಈಗಾಗಲೇ ಆರು ವರ್ಷ ವ್ಯವಹಾರ ನಡೆಸಿ ದಾಪುಗಾಲು ಹಾಕುತ್ತಿದೆ. ಆಡಳಿತ ಸಮಿತಿ, ಸಿಬ್ಬಂದಿ, ಸದಸ್ಯರ ಶ್ರಮದಿಂದ ಸಂಘ ಲಾಭದಲ್ಲಿದೆ. ಸಂಸ್ಥೆಯು ಜನಿಸಿದ ಅಲ್ಪ ಅವಧಿಯಲ್ಲೇ ಗಮನಾರ್ಹವಾಗಿ ಆರ್ಥಿಕ ಸಾಧನೆ ಮಾಡಲು, ಕಷ್ಟದ ಜನರಿಗೆ ನೆರವಾಗಲು ಸಾಧ್ಯವಾಗಿದ್ದರೆ, ಇದಕ್ಕೆ ಸದಸ್ಯರು, ಗ್ರಾಹಕರು ಕಾರಣ” ಎಂದರು.
ಸಹಕಾರಿ ಸಂಸ್ಥೆಗಳು ಠೇವುಗಳೊಂದಿಗೆ ಅರ್ಹ ವ್ಯಕ್ತಿಗಳಿಗೆ ಸಾಲವನ್ನು ವಿತರಿಸಿ ಅವರಿಗೆ ಆರ್ಥಿಕವಾಗಿ ಸಬಲರಾಗಿ ಮಾಡಬೇಕು ಅಂದಾಗ ಮಾತ್ರ ಸಹಕಾರಿ ಸಂಘಗಳು ಪ್ರಗತಿ ಹೊಂದಲು ಸಾಧ್ಯ ಎಂದ ಅವರು.
ಬ್ಯಾಂಕ್ ಹಾಗೂ ಸಾಲಗಾರರು ಚಕ್ಕಡಿಯ ಎರಡು ಗಾಲಿಗಳು ಇದಂತೆ ಕಾರಣ ಸಹಕಾರಿಗಳು ಉತ್ತಮ ಸ್ಥಿತಿಯನ್ನು ಹೊಂದಬೇಕಾದರೆ ಇಬ್ಬರು ಪ್ರಾಮಾಣಿಕವಾಗಿ ಶ್ರಮಿಸಬೇಕು ಹೇಳಿದರು.
ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ರಾದ ಅಶೋಕ ಡಿಗ್ರಜ, ಬಾಳಸಾಬ ಪಾರಶೆಟ್ಟಿ,ತಮ್ಮಣ ಕಮತೆ,ನೇಮಗೌಡ ಪಾಟೀಲ,ಸುರೇಶ ಕುಡವಕ್ಕಲಗಿ,ರಾವಬಹಾದ್ದೂರ ಕುಡಚಿ, ನಿಂಗಪ್ಪ ಹಕ್ಕಿ,ದೀಪಕ ಪೋತದಾರ, ಮನಿಷಾ ನಾಮದಾರ, ಮನಿಷಾ ಖೋತ,ಸದಾಶಿವ ಹರಳೆ,ಸಹದೇವ ನಾಯಕ, ಸೇರಿದಂತೆ ಸಭೆಯಲ್ಲಿ ಸಂಘದ ಶೇರುದಾರರು, ಹಾಗೂ ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಇದ್ದರು.ಸಂಘದ ಮಾನ್ಯೆಜರ ಮಲ್ಲಿಕಾರ್ಜುನ ಪಾರಶೆಟ್ಟಿ,ವರದಿ ವಾಚನ ಮಾಡಿದರು. ಭೂಷಣ ಪಾಟೀಲ ನಿರೂಪಿಸಿದರು ವಿಶ್ವನಾಥ ಪಾರಶೆಟ್ಟಿ ವಂದಿಸಿದರು.
ವರದಿ : ಮುರಗೇಶ ಗಸ್ತಿ




