Ad imageAd image

ಅದ್ದೂರಿಯಾಗಿ ನಡೆದು ಸಂಪನ್ನವಾದ ವೀರಾಪುರದ 6 ನೇ ವರ್ಷದ ಕೇದಾರಲಿಂಗೇಶ್ವರನ ಜಾತ್ರೋತ್ಸವ

Bharath Vaibhav
ಅದ್ದೂರಿಯಾಗಿ ನಡೆದು ಸಂಪನ್ನವಾದ ವೀರಾಪುರದ 6 ನೇ ವರ್ಷದ ಕೇದಾರಲಿಂಗೇಶ್ವರನ ಜಾತ್ರೋತ್ಸವ
WhatsApp Group Join Now
Telegram Group Join Now

ಕಿತ್ತೂರು:ಹೌದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಮಲಪ್ರಭಾ ನದಿ ದಂಡೆಯ ವೀರಾಪುರ ಗ್ರಾಮದ ಐತಿಹಾಸಿಕ ದೇವಸ್ಥಾನ ಶ್ರೀ ಕೇದಾರಲಿಂಗೇಶ್ವರ ದೇವಸ್ಥಾನದ ಏಕೊರಾಮದ್ಯರ 6 ನೇ ವರ್ಷದ ಜಾತ್ರೋತ್ಸವ ಅದ್ದೂರಿಯಾಗಿ ನಡೆದು ಸಂಪನ್ನಗೊಂಡಿತು.

ಈ ಜಾತ್ರೋತ್ಸವದ ಕಾರ್ಯಕ್ರಮ ವನ್ನು ಕೇದಾರಪೀಠದ ಶಾಖಾ ಮಠಗಳಾದ ಮುತ್ನಾಳ, ಬೆಟಸುರ ಹಾಗೂ ವೀರಾಪುರ ಗ್ರಾಮಗಳ ಶಾಖಾ ಮಠಗಳ ಪೀಠಾಧ್ಯಕ್ಷರು ಆದ ಶ್ರೀ ಶಿವಾನಂದ ಶಿವಾಚಾರ್ಯಗಳು ದಿವ್ಯ ಸಾನಿಧ್ಯ ವಹಿಸಿದ್ದರು, ಪೂಜ್ಯ ದೇವರ ಶಿಗಿಹಳ್ಳಿ ಮಡಿ ವಾಳೇಶ್ವರ ಮಠದ ಶ್ರೀಗಳು, ಕುಲವಳ್ಳಿ ಯೋಗಾಶ್ರಮದ ಓಂ ಗುರೂಜಿ ಹಾಗೂ ತುರುಮುರಿ ಶಾಂತಯ್ಯ ಸ್ವಾಮಿಗಳು ಹಾಗೂ ವೀರಾಪುರ ಗ್ರಾಮದ ಸಿದ್ರಾಮಯ್ಯ ಹಿರೇಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರು, ಕಾಂಗ್ರೆಸ್ ಮುಖಂಡರು ಆದ ಶ್ರೀ ಶಂಕರ ಹೊಳಿ, ಬಸನಗೌಡ ಸಿದ್ರಾಮಣಿ , ಕಿತ್ತೂರು ಸಿ.ಪಿ.ಐ ಶಿವಾನಂದ ಗುಡಗನಟ್ಟಿ ರೈತ ಮುಖಂಡ ಬಸವರಾಜು ಮೊಕಾಶಿ, ಹಿರಿಯ ಶಿಕ್ಷಕ ಡಾ. ಶೇಖರ್ ಹಲಸಗಿ , ಗ್ರಾಪಂ ಅಧ್ಯಕ್ಷ ಅಲಿ ಸಾಬ್ ತಳಗಡೆ ಹಾಗೂ ಕೇದಾರ ಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಕೀರ ಗೌಡ ಪಾಟೀಲ್, ಹಿರಿಯ ಶಿಕ್ಷಕ ರುದ್ರಗೌಡ ನಂದಿಹಳ್ಳಿ, ಚನ್ನಬಸಯ್ಯ ಗುಂಡಕಲ್, ಜಾತ್ರಾ ಕಮಿಟಿ ಉಪಾಧ್ಯಕ್ಷ ಉತ್ತಮ ಅಂಬಡಗಟ್ಟಿ, ಆರಾಧಕರು ಬಸವರಾಜು ಹಿರೇಮಠ, ಅಡಿವೆಪ್ಪ ತಳವಾರ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ ಈ ಜಾತ್ರೋತ್ಸವ ಉದ್ಘಾಟನೆ ಗೊಂಡಿತು, ಇದೇ ಸಂದರ್ಭದಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ರೇಣುಕಾಚಾರ್ಯರ ಬಾವಚಿತ್ರ ಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ 2025 ರ ಕೇದಾರ ನಾಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು, ಸಂಜೆ 7 ಘಂಟೆಯಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು, ವಿವಿಧ ಕ್ರೀಡಾಸಂಘಗಳ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ರಾತ್ರಿ 10 ಘಂಟೆಯಿಂದ ತಡ ರಾತ್ರಿಯವರೆಗೂ ರಸ ಮಂಜರಿ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಾತ್ರೋತ್ಸವ ಸಮಿತಿ ಅಧ್ಯಕ್ಷರು ಆದ ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಈ ಜಾತ್ರೆ ವಿಶೇಷತೆ ಬಗ್ಗೆ ಭರ್ಜರಿಯಾಗಿ ಮಾತನಾಡಿದರು. ಸಂಗೀತ ಕಾರ್ಯಕ್ರಮದ ಉದ್ಘಾಟನೆಯನ್ನು ಕಿತ್ತೂರು ಸಿ.ಪಿ.ಐ ಶಿವಾನಂದ ಗುಡುಗನಟ್ಟಿ ದೇವರ ಹಾಡನ್ನು ಹಾಡುವ ಮೂಲಕ ಉದ್ಘಾಟನೆ ಮಾಡಿದರು. ರಸ ಮಂಜರಿ ಕಾರ್ಯಕ್ರಮ ಕಲಾವಿದರು ನೆರೆದಿದ್ದ ಅಪಾರವಾದ ಜನಸ್ತೋಮಕ್ಕೆ ಮನರಂಜನೆ ನೀಡಿದರು. ಒಟ್ಟಾರೆ ಅದ್ದೂರಿಯಾಗಿ ಯಶಸ್ವಿಯಾಗಿ 6 ನೇ ವರ್ಷದ ಕೇದಾರ ಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ ಗೊಂಡಿತು.

ವರದಿ: ಬಸವರಾಜು

WhatsApp Group Join Now
Telegram Group Join Now
Share This Article
error: Content is protected !!