Ad imageAd image

ವಾಹನ ಡಿಕ್ಕಿ ಕಡವೆ ಸಾವು, 7 ಜನರ ಬಂಧನ : ಸೂಕ್ತ ಮಾಹಿತಿ ನೀಡದ ಅರಣ್ಯ ಇಲಾಖೆ.

Bharath Vaibhav
ವಾಹನ ಡಿಕ್ಕಿ ಕಡವೆ ಸಾವು, 7 ಜನರ ಬಂಧನ : ಸೂಕ್ತ ಮಾಹಿತಿ ನೀಡದ ಅರಣ್ಯ ಇಲಾಖೆ.
WhatsApp Group Join Now
Telegram Group Join Now

ಚಾಮರಾಜನಗರ:-ತಾರ್ ವಾಹನವು ಕಡವೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದು, ಅರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಬಿ.ಆ‌ರ್.ಟಿ. ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯ, ಬಿ.ಆರ್.ಹಿಲ್ಸ್ ಶಾಖೆಯ ಬಿ.ಆರ್.ಹಿಲ್ಸ್ ಗಸ್ತಿನ ಲಿಂಗನಕಟ್ಟೆ ಅರಣ್ಯ ಪ್ರದೇಶದ ಬಳಿ ನಡೆದಿದೆ.

ಬಿಳಿಗಿರಿರಂಗನ ಬೆಟ್ಟ ದಿಂದ ಯಳಂದೂರಿಗೆ ತೆರಳುವ ಮುಖ್ಯರಸ್ತೆಯಲ್ಲಿ KA -01 N 7502 ಸಂಖ್ಯೆಯ ಕಪ್ಪು ಬಣ್ಣದ ಮಹಿಂದ್ರಾ ಥಾರ್ ವಾಹನವು ವೇಗವಾಗಿ ಬಂದು ವನ್ಯಪ್ರಾಣಿಯಾದ ಕಡವೆಗೆ ಡಿಕ್ಕಿಹೊಡೆದಿರುವ ಪರಿಣಾಮ ಕಡವೆ ಸಾವನ್ನಪ್ಪಿದ್ದು, ಈ ಸಂಭಂಧ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ವರುಣ್ ಜಿ , ಬೆಂಗಳೂರಿನ ಗೊಲ್ಲರಹಟ್ಟಿ ಎನ್.ಪಿ. ಪ್ರಶಾಂತ್ ,ಆರ್.ಅಂಕಿತ್, ವರ್ಣೆಕರ್ ಬಿನ್ ರಾಜು, ಬೆಂಗಳೂರಿನ ಎಸ್.ಆರ್.ಎಸ್ ಲೇಔಟ್ ನ ಎಂ.ವರ್ಣೆಕರ್, ದಾವಣಗೆರೆ ಯ ಹೆಚ್.ಡಿ. ವಿವೇಕಾನಂದ ರವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ ಹೆಚ್.ಎನ್. ನಾಗೇಂದ್ರ ನಾಯಕ, ರವರ ಮಾರ್ಗದರ್ಶನದ ಮೇರೆಗೆ, ಉಪ ವಲಯ ಅರಣ್ಯಾಧಿಕಾರಿ ಎಂ.ಯಶಸ್ಟ್ ಗಳು ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.ಸೂಕ್ತ ಮಾಹಿತಿ ನೀಡದ ಅರಣ್ಯ ಅಧಿಕಾರಿಗಳು.

ಕಡವೆಗೆ ಡಿಕ್ಕಿ ಒಡೆದಿರುವ ವಾಹನದಲ್ಲಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದೂ, ಯಾವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿಸಿಲ್ಲ,

ವಾಹನವು ಯಾವ ಕಡೆ ಯಿಂದ ಹೋಗಿದೆ ಎಂಬ ಸರಿಯಾಗಿ ಮಾಹಿತಿ ಯನ್ನು ನೀಡುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ವಿಪಲವಾಗಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದ ಗುಂಬಳ್ಳಿ ಚಕ್ ಪೋಸ್ಟ್ ಬಳಿ ಯಾವುದೇ ಸಿಸಿ ಕ್ಯಾಮರಾ ಗಳು ಇರುವುದಿಲ್ಲ, ಕಡವೆಗೆ ಡಿಕ್ಕಿ ಒಡೆದಿರುವ ವಾಹನ ಯಾವ ಸಮಯದಲ್ಲಿ ಹೋಗಿದೆ,ಅಥವಾ ರಾತ್ರಿ ಸಮಯದಲ್ಲಿ ಹೇಗೆ ಅರಣ್ಯಕ್ಕೆ ಇಲಾಖೆ ಯವರು ವಾಹನಗಳನ್ನು ಬಿಡುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತದೆ.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!