ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಮಕ್ಕಳ ಕಳ್ಳಿಯರು ಎಂದು ಭಾವಿಸಿ 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಸಾರ್ವಜನಿಕರು ಥಳಿಸಿರು ಘಟನೆ ನಡೆದಿದೆ. ಮಕ್ಕಳ ಕಳ್ಳಿಯರು ಎಂದು ಭಾವಿಸಿ ಬಸ್ ನಿಲ್ದಾಣದಲ್ಲಿ ಈ ಮಹಿಳೆಯರಿಗೆ ಹೊಡೆದಿದ್ದಾರೆ.
ಈ ಏಳು ಮಹಿಳೆಯರನ್ನು ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದವರು ಎಂದು ಹೇಳಲಾಗಿದೆ. ಹೇರ್ ಪಿನ್ ಮಾರುತ್ತಿದ್ದ ಅಣ್ಣಿಗೇರಿ ಮೂಲದ ಮಹಿಳೆಯರನ್ನು ಮಕ್ಕಳ ಕಳ್ಳಿಯರು ಎಂದು ಹೇಳಿ ಥಳಿಸಿದ್ದಾರೆ. ಇದೀಗ ಸ್ಥಳೀಯರು ಅಪರಿಚಿತ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.




