Ad imageAd image

7 ವರ್ಷದ ಆಯಿಷಾ – ಮೊದಲ ರೋಜಾದಲ್ಲಿ ಮೆಚ್ಚುಗೆ ಪಡೆದ ಬಾಲಕಿ

Bharath Vaibhav
7 ವರ್ಷದ ಆಯಿಷಾ – ಮೊದಲ ರೋಜಾದಲ್ಲಿ ಮೆಚ್ಚುಗೆ ಪಡೆದ ಬಾಲಕಿ
WhatsApp Group Join Now
Telegram Group Join Now

ಅಥಣಿ: ತಾಲೂಕಿನ ಕೊಕಟನೂರ ಗ್ರಾಮದ ಚಿಕ್ಕ ಬಾಲಕಿ ಆಯಿಷಾ ಶಫಿಕ್ ಮೊಮೀನ್, ಕೇವಲ 7 ವರ್ಷದ ವಯಸ್ಸಿನಲ್ಲೇ ರೋಜಾ ಪಾಲಿಸಿಕೊಂಡು ಶ್ಲಾಘನೀಯ ಉದಾಹರಣೆಯನ್ನೇ ಸೃಷ್ಟಿಸಿದ್ದಾಳೆ. ಬೆಳಿಗ್ಗೆ 5 ಗಂಟೆ 30 ನಿಮಿಷಕ್ಕೆ ಸಹರಿ ಮಾಡಿ ರೋಜಾ ಆರಂಭಿಸಿದ ಆಯಿಷಾ, ದಿನಪೂರ್ತಿ ಧೈರ್ಯ ಮತ್ತು ಸಹನೆಯೊಂದಿಗೆ ಉಪವಾಸವನ್ನು ಮುಂದುವರಿಸಿಕೊಂಡಳು.

ಉಷ್ಣತೆ, ಆಟ-ಪಾಠ, ದಿನನಿತ್ಯದ ಚಟುವಟಿಕೆಗಳ ನಡುವೆ ಕೂಡಾ ರೋಜಾದ ನಿಯಮಗಳನ್ನು ಕಾಪಾಡಿಕೊಂಡು, ಸಂಜೆ 6 ಗಂಟೆ 40 ನಿಮಿಷಕ್ಕೆ ಇಫ್ತಾರ್ ಮೂಲಕ ರೋಜಾ ಮುಕ್ತಾಯಗೊಳಿಸಿದೆ. ಈ ಚಿಕ್ಕ ವಯಸ್ಸಿನಲ್ಲೂ ತೋರಿಸಿದ ನಿಯಮ, ಶಿಸ್ತು ಮತ್ತು ಭಕ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕೊಕಟನೂರ ಗ್ರಾಮದಲ್ಲಿ ಕುಟುಂಬದವರು ಮತ್ತು ನೆರೆಹೊರೆಯವರು ಆಯಿಷಾಳ ಈ ಮೊದಲ ರೋಜಾ ಸಾಧನೆಗೆ ಸಂತೋಷ ವ್ಯಕ್ತಪಡಿಸಿ, ಆಕೆಯ ಧೈರ್ಯದ ಮೆಚ್ಚುಗೆಯನ್ನು ಹೇಳಿದರು. ಬಾಲಕಿಯ ಈ ರೋಜಾ ದಿನವು ಆಕೆಗೆ ವಿಶೇಷವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಭಕ್ತಿ-ಶಿಸ್ತುಗಳಿಂದ ಮುಂದುವರಿಯಲಿ ಎಂದು ಹಾರೈಸಲಾಗಿದೆ.

ವರದಿ :ಅಜಯ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!