——33 ವರ್ಷಗಳ ನಂತರ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶಾರುಖ್ ಖಾನ್ ಪ್ರಮುಖ ಆಕರ್ಷಣೆ

ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ 33 ವರ್ಷಗಳ ನಂತರ ಮೊದಲ ಬಾರಿಗೆ (ಶ್ರೇಷ್ಠ ನಟ) ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು, ಇಂದು ನವದೆಹಲಿಯಲ್ಲಿ ನಡೆಯುವ 71 ನೇ ನ್ಯಾಷಿನಲ್ ಆವಾರ್ಡ್ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಪ್ರಶಸ್ತಿ ಗೌರವ ಪಡೆಯಲಿದ್ದಾರೆ.
ನಗರದ ವಿಜ್ಞಾನ ಭವನದಲ್ಲಿ ಸಮಾರಂಭ ನಡೆಯಲಿದ್ದು, 4 ಗಂಟೆಗೆ ಶಾರುಖ್ ಖಾನ್ ಸೇರಿದಂತೆ ವಿವಿಧ ಸಾಧಕರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಗೌರವ ಪಡೆಯಲಿದ್ದಾರೆ. ಸಮಾರಂಭದ ನೇರ ಪ್ರಸಾರ ಡಿ.ಡಿ ನ್ಯೂಜ್ ಹಾಗೂ ಯುಟೂಬ್ ಚಾನೆಲ್ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದ ನೇರ ಪ್ರಸಾರ ವಾಗಲಿದೆ. ನೇರ ಪ್ರಸಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.




