ನವದೆಹಲಿ: ಸಂವಿಧಾನ ಅಂಗೀಕರಿಸಿ ನವೆಂಬರ್ 26ಕ್ಕೆ 75 ವರ್ಷ ತುಂಬಲಿದ್ದು, ಅದೇ ದಿನದಂದು 75ನೇ ವರ್ಷಾಚರಣೆ ಅಂಗವಾಗಿ ಸಂಸತ್ತಿನ ಜಂಟಿ ಅಧಿವೇಶನ ನಡೆಸಲಾಗುವುದು.
ಸಂಸತ್ತಿನ ಸಂವಿಧಾನ ಸದನದ ಸಭಾಂಗಣದಲ್ಲಿ ಅಧಿವೇಶನ ನಡೆಯಲಿದೆ. 1949ರ ನವೆಂಬರ್ 26ರಂದು ಅಂದಿನ ಸಂಸತ್ ಇದೇ ಸಭಾಂಗಣದಲ್ಲಿ ಸಂವಿಧಾನವನ್ನು ಅಂಗೀಕರಿಸಿತ್ತು.ನವೆಂಬರ್ 26ರಂದು ಪ್ರತಿ ವರ್ಷ ಕಾನೂನು ದಿನವನ್ನಾಗಿ ಆಚರಿಸಲಾಗುತ್ತಿತ್ತು.
ಆದರೆ, 2015ರ ಡಾ. ಬಿಆರ್ ಅಂಬೇಡ್ಕರ್ ಅವರ 125ನೇ ಜಯಂತಿ ಸಂದರ್ಭದಲ್ಲಿ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂತೆಯೇ ನ. 26ರಂದು ಸಂವಿಧಾನ ಅಂಗೀಕರಿಸಿ 75 ವರ್ಷವಾದ ಹಿನ್ನಲೆಯಲ್ಲಿ ಸಂಸತ್ ಜಂಟಿ ಅಧಿವೇಶನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂವಿಧಾನದ 75 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26 ರಂದು ಸರ್ಕಾರವು ಸಂಸತ್ತಿನ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನವನ್ನು ನಡೆಸುವ ಸಾಧ್ಯತೆಯಿದೆ.
ಚಳಿಗಾಲದ ಅಧಿವೇಶನವು ನವೆಂಬರ್ 25 ರಿಂದ ಪ್ರಾರಂಭವಾಗಬಹುದು ಮತ್ತು ವಿಶೇಷ ಜಂಟಿ ಅಧಿವೇಶನವು 1949 ರಲ್ಲಿ ಸಂವಿಧಾನವನ್ನು ಅಂಗೀಕರಿಸಿದ ಸಂವಿಧಾನ್ ಸದನ್(ಹಳೆಯ ಸಂಸತ್ತಿನ ಕಟ್ಟಡ) ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.