ಲಿಂಗಸ್ಗೂರು : ಕರ್ನಾಟಕ ರತ್ನ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ 75ನೇ ಜನ್ಮದಿನಾಚರಣೆ ಸಂಭ್ರಮ..
ಕರುಣಾಮಯಿಯ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ, ಕರ್ನಾಟಕ ರತ್ನ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ ಅವರ 75ನೇ ಜನ್ಮದಿನಾಚರಣೆಯನ್ನು ಸಿಹಿ ಹಂಚಿ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಆಚರಿಸಲಾಯಿತು.
ಪಟ್ಟಣದ ಬಸ್ ನಿಲ್ದಾಣದ ಮುಂಬಾಗ ಸ್ವಾಮಿ ವಿವೇಕಾನಂದ ಕಮಾನು ಹತ್ತಿರ ಗುರುವಾರ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಜನುಮದಿನ ಕಾರ್ಯಕ್ರಮಕ್ಕೆ ಹಿರಿಯ ಪತ್ರಕರ್ತ ಶಿವರಾಜ ಕೆಂಭಾವಿಯವರು ಡಾ.ವಿಷ್ಣುವರ್ಧನ್ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯಲ್ಲಿ ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವ ಮೂಲಕ ಅವರಿಗೆ ಗೌರವ ನೀಡಿರುವುದು ಸ್ವಾಗತಾರ್ಹ ಮತ್ತು ತುಂಬಾ ಸಂತೋಷ ತಂದಿದೆ ಎಂದರು.
ಅವರ ಸ್ಮಾರಕ ನಿವೇಶನದ ಇತ್ತೀಚಿನ ದಿನಗಳಲ್ಲಿ ಆದ ಬೆಳವಣಿಗೆಗಳು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ ಸರ್ಕಾರ ಅದೇ ಜಾಗದಲ್ಲಿ ಹತ್ತು ಗುಂಟೆ ಭೂಮಿಯನ್ನು ನೀಡಿ ಸ್ಮಾರಕ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ ಅಭಿಮಾನಿಗಳ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ವಿಷ್ಣುವರ್ಧನ್ ಅವರ ಅಭಿನಯದ ನೂರಾರು ಚಿತ್ರಗಳು ಸಾಮಾಜಿಕ ನ್ಯಾಯ, ಕುಟುಂಬ ಆಧಾರಿತ, ದೇಶ ಭಕ್ತಿ ಸೇರಿದಂತೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಹೇಳಿದರು.
ಈ ವೇಳೆ ಅಭಿಮಾನಿಗಳ ಬಳಗದ ಮಹಾಂತೇಶ ಹೂಗಾರ, ಅಶೋಕ ದಿಗ್ಗಾವಿ, ಭೀಮಸೇನ ಕುಲಕರ್ಣಿ, ಮಾದೇಶ್ ಸರ್ಜಾಪುರ, ಮಲ್ಲಿಕಾರ್ಜುನ ಕೆಂಭಾವಿ, ಮಂಜುನಾಥ ಪಾಟೀಲ್, ಸಲಿಮ್ ಸ್ವದೇಶಿ, ಪಂಪಣ್ಣ ಹೂಗಾರ, ತಿಮ್ಮಣ್ಣ ಬೋವಿ, ವರ್ಮಾ ಮುದಗಲ್, ಹನುಮೇಶ ಹೂಗಾರ, ಪರಶುರಾಮ ಕೆಂಭಾವಿ, ಸಾದತ್ ಅಲಿ, ಪ್ರಮೋದ್ ಕನಕಗಿರಿ, ಯಲ್ಲಪ್ಪ ಬಾಲಗಾವಿ, ಪರಶುರಾಮ ಮುಂಡೆವಾಡಿ, ಮುನ್ನಾ, ರಾಮು ಡ್ರೈವರ್ ಸೇರಿದಂತೆ ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




