ಯಳಂದೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ಸಂವಿಧಾನ ರಚನೆಯ 75ನೇ ವರ್ಷಾಚರಣೆಯ ಅಂಗವಾಗಿ “ಸಂವಿಧಾನ 75 ರ ಪಾದಯಾತ್ರೆ” ಕಾರ್ಯಕ್ರಮದ ಭಾಗವಾಗಿ ಇಂದು ಯಳಂದೂರು ಪಟ್ಟಣದಲ್ಲಿ ಭಾವಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪಾದಯಾತ್ರೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಸದಸ್ಯರು ಯಳಂದೂರು ಪಟ್ಟಣದ ಅಂಬೇಡ್ಕರ್ ಭವನಕ್ಕೆ ಆಗಮಿಸಿ, ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪಾರ್ಚನೆಯನ್ನು ಸಲ್ಲಿಸಿದರು.
ಜಿಲ್ಲೆಯ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಪಾದಯಾತ್ರೆ ಯಳಂದೂರು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿತ್ತು.
ನಂತರ ಎಬಿವಿಪಿ ಯ ಪ್ರಾಂತ ಕಾರ್ಯದರ್ಶಿಯಾದ ಪ್ರವೀಣ್ ರವರು ಮಾತನಾಡಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಮೂಲಕ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿಂದುಳಿದ ವರ್ಗದ ಜನರಿಗೆ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನೀಡಿದರು. ಅವರ ಕೊಡುಗೆ ಇಂದಿಗೂ ಯುವಜನತೆಗೆ ದಿಕ್ಕು ತೋರುತ್ತಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು “ಜೈ ಭೀಮ್ – ಭಾರತ ಸಂವಿಧಾನ ಅಮರವಾಗಲಿ”, “ಬಾಬಾಸಾಹೇಬ್ ಅಮರರಾಗಲಿ” ಎಂಬ ಘೋಷಣೆಗಳನ್ನು ಕೂಗಿ ಸಂವಿಧಾನದ ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಅನಿಲ್, ತಾಲೋಕು ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮಾಂಬಳ್ಳಿ ರಾಮಣ್ಣ, ಮದ್ದೂರು ಸುರೇಶ್, ಕೆಸ್ತೂರು ರಾಜು,ರಾಮನಾಯಕ ಯಳಂದೂರು, ರಾಜು ವೈಕೆ ಮೋಳೆ ಹಾಗೂ ಕಾಲೇಜು ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ವರದಿ : ಸ್ವಾಮಿ ಬಳೇಪೇಟೆ




