ಕಾಳಗಿ: ತಾಲೂಕಿನ ಕುಡಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವವನ್ನು ಕಲರಫುಲ್ ಆಗಿ ಆಚರಣೆ ಮಾಡಲಾಯಿತು, ಮೊದಲಿಗೆ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿ,ಈ ಸಂದರ್ಭದಲ್ಲಿ : ದೈಹಿಕ ಆಟದಲ್ಲಿ ಅಂದರೆ ಗೋಣಿಚೀಲ ಸ್ಪರ್ಧೆ, ಓಟ ಸ್ಪರ್ಧೆ ಮತ್ತು ಕಲಿಕಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾಣಿಕೆಯನ್ನು ನೀಡಲಾಯಿತು ಮತ್ತು ದೇಶ ಭಕ್ತಿ ಹಾಡುಗಳಿಗೆ , ವಿದ್ಯಾರ್ಥಿಗಳಿಂದ ನೃತ್ಯ ಮಾಡಲಾಯಿತು,ನಂತರ ನವಂಬರ್ 26 1949 ರಂದು ಸಂವಿಧಾನವು ಸರ್ವಾನುಮತದಿಂದ ಅಂಗೀಕಾರಗೊಂಡಿತ್ತು,ಆನಂತರ ಜನವರಿ 26 1950 ರಿಂದ ಕಾರ್ಯರೂಪಕ್ಕೆ ಬಂದಿತ್ತು,ಪರಕಿಯರ ಆಳ್ವಿಕೆಯಲ್ಲಿ ಶತಮಾನಗಳ ಕಾಲ ಗುಲಾಮಗಿರಿಯಲ್ಲಿ ಮಲಗಿದ್ದ ಭಾರತವು 600ಕ್ಕೂ ಹೆಚ್ಚು ರಾಜ್ಯ ಸಂಸ್ಥಾನಗಳಿದ್ದು ಸಾವಿರಾರು ಜಾತಿಗಳಾಗಿ ಚಿದ್ರಗೊಂಡಿತ್ತು,ಇಂತಹ ದೇಶಕ್ಕೆ ಸರ್ವ ಸಮ್ಮತವಾದ ಸಂವಿಧಾನವನ್ನು ರಚಿಸುವುದು ಒಂದು ದೊಡ್ಡ ಸವಲಾಗಿತ್ತು,ಇಂತಹ ಬೃಹತ್ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡ ಬಾಬಾ ಸಾಹೇಬ ಅಂಬೇಡ್ಕರ್ ಅವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಅನೇಕ ವಿರೋಧಗಳನ್ನು ಎದುರಿಸಿ, ವಿಶ್ವದ ಶ್ರೇಷ್ಠ ಸಂವಿಧಾನವನ್ನು ಈ ದೇಶಕ್ಕೆ ಅರ್ಪಿಸಿದರು ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮಂತ ಗಂಜಿ ಅವರು ಮಾತನಾಡಿದರು, ಈ ಸಂಧರ್ಭದಲ್ಲಿ : ಸಹ ಶಿಕ್ಷಕರು, sdmc ಸರ್ವ ಸದಸ್ಯರು, ಊರಿನ ಗಣ್ಯವ್ಯಕ್ತಿಗಳು ಮತ್ತು ಮಹಿಳೆಯರು, ಉಪಸ್ಥಿತರಿದ್ದರು
ವರದಿ : ಹಣಮಂತ ಕುಡಹಳ್ಳಿ




