ಬಸವನ ಬಾಗೇವಾಡಿ : 76 ನೇ ಗಣರಾಜ್ಯೋತ್ಸವ ಆಚರಣೆ ನಗರದ ಶ್ರೀ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ತಹಶೀಲ್ದಾರರು ಹಾಗೂ ತಾಲೂಕ ಕಾರ್ಯನಿರವಾಹಕ ದಂಡಾಧಿಕಾರಿಗಳು, ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬದಗಳ ಸಮಿತಿ ಬಸವನ ಬಾಗೇವಾಡಿ ಶ್ರೀ. ವಾಯ್. ಎಸ್. ಸೋಮನಕಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರರು ಧ್ವಜವಂದನೆ ಸ್ವೀಕರಸಿ ಪೆರೇಡ್ ಪರಿವೀಕ್ಷಣೆ ನಡೆಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿದ ಶಾಲಾ ಕಾಲೇಜುಗಳ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ತಹಶೀಲ್ದಾರರು ಗಣರಾಜ್ಯೋತ್ಸವ ಸಂದೇಶವನ್ನು ನೀಡಿದರು. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಕ್ಷಿಸಿದರು. ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಬಸವನ ಬಾಗೇವಾಡಿ ಶ್ರೀ ಪ್ರಕಾಶ ಕೆ. ದೇಸಾಯಿ, ಪೋಲಿಸ ಉಪ ವಿಭಾಗಾಧಿಕಾರಿಗಳು ಬಸವನ ಬಾಗೇವಾಡಿ ಶ್ರೀ ಬಲ್ಲಪ್ಪ ನಂದಗಾಂವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವನ ಬಾಗೇವಾಡಿ ಶ್ರೀ ವಸಂತ. ರಾಠೋಡ, ಹಾಗೂ ಮುಖ್ಯಾಧಿಕಾರಿಗಳು, ಪುರಸಭೇ ಬಸವನ ಬಾಗೇವಾಡಿ ಶ್ರೀ ಹೆಚ್. ಎಸ್. ಚಿತ್ತರಗಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ:ಕೃಷ್ಣಾ ಎಚ್. ರಾಠೋಡ




