Ad imageAd image

ಸೋಫಿ ಶೈನ್ ‘ಮೈ ಲವ್​’: ಶಿಖರ್ ಧವನ್ ಹೊಸ ಇನ್ನಿಂಗ್ಸ್

Bharath Vaibhav
ಸೋಫಿ ಶೈನ್ ‘ಮೈ ಲವ್​’: ಶಿಖರ್ ಧವನ್ ಹೊಸ ಇನ್ನಿಂಗ್ಸ್
WhatsApp Group Join Now
Telegram Group Join Now

ತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟಿಗರ ಜೀವನದಲ್ಲಿ ಪ್ರೀತಿಯ ಯುಗ ಆರಂಭವಾದಂತೆ ಕಾಣುತ್ತಿದೆ. ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಾಹಲ್​ನಿಂದ ಶಿಖರ್ ಧವನ್​ವರೆಗೆ ಅವರ ಜೀವನದಲ್ಲಿ ಈಗ ಪ್ರೀತಿಯ ಕೊರತೆಯಿಲ್ಲ. ಯುಜ್ವೇಂದ್ರ ಚಾಹಲ್ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ನಂತರ, ಈಗ ಶಿಖರ್ ಧವನ್ ಬಗ್ಗೆ ಚರ್ಚೆ ಆರಂಭವಾಗಿದೆ.

ಶಿಖರ್ ಧವನ್ ನಿನ್ನೆ ರಾತ್ರಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಇದಕ್ಕೆ ಕಾರಣ ಅವನ ಜೀವನದಲ್ಲಿ ಬಂದ ಪ್ರೇಮ. ಹೌದು, ಈಗ ಶಿಖರ್ ಧವನ್ ಮತ್ತು ಅವರ ಗೆಳತಿ ತಮ್ಮ ಪ್ರೀತಿಯನ್ನು ಘೋಷಿಸಿದ್ದಾರೆ. ಇಬ್ಬರೂ ಅಧಿಕೃತವಾಗಿ ಸಂಬಂಧದಲ್ಲಿದ್ದೇವೆ ಎಂದು ಜಗತ್ತಿಗೆ ತಿಳಿಸಿದ್ದಾರೆ. ಇಬ್ಬರ ನಡುವಿನ ಪ್ರೀತಿಯು ಸುಂದರವಾದ ಪ್ರಣಯ ಚಿತ್ರ ಮತ್ತು ಪ್ರೀತಿಯ ಟೈಟಲ್​ನೊಂದಿಗೆ ಜನರ ಮುಂದೆ ಬಂದಿದೆ. ಸದ್ಯ ಈ ಪೋಸ್ಟ್ ವೈರಲ್​ ಆಗಿದ್ದು, ಶಿಖರ್ ಅವರ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಪೋಸ್ಟ್ ವೈರಲ್ಶಿಖರ್ ಧವನ್ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸೋಫಿ ಶೈನ್ ಜೊತೆಗಿನ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ. ಇದರೊಂದಿಗೆ, ಇಬ್ಬರ ಬಗ್ಗೆ ಇದ್ದ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ. ಸೋಫಿ ಶೈನ್ ಮಾಡಿದ ಪೋಸ್ಟ್ ಅನ್ನು ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅವರಿಬ್ಬರು ನಿರಂತರವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಇದು ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಊಹಾಪೋಹಗಳು ಎದ್ದಿದ್ದವು. ಶಿಖರ್ ಧವನ್ ತಮ್ಮ ಸಂಬಂಧದ ಬಗ್ಗೆ ಬಹಳ ದಿನಗಳಿಂದ ಮೌನವಾಗಿದ್ದರು. ಆದರೆ ಈಗ ಅದನ್ನು ಸಾರ್ವಜನಿಕಗೊಳಿಸಿದ್ದಾರೆ. ಧವನ್ ಜೊತೆ ಕುಳಿತಿರುವ ಫೋಟೋ ಹಂಚಿಕೊಂಡ ಸೋಫಿ ಶೈನ್ ‘ಮೈ ಲವ್​’ ಎಂದು ಬರೆದುಕೊಂಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!