Ad imageAd image

ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ 78 ನೇ ಸ್ವಾತಂತ್ರ ದಿನಾಚರಣೆ

Bharath Vaibhav
ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ 78 ನೇ ಸ್ವಾತಂತ್ರ ದಿನಾಚರಣೆ
WhatsApp Group Join Now
Telegram Group Join Now

ಹುಬ್ಬಳ್ಳಿ ಇಲ್ಲಿನ ಉಪ ಕಾರಾಗೃಹದಲ್ಲಿ 78 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.

ಬಾಗಲಕೋಟೆಯ 2 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಿಗಂಜಿ ಮಾತನಾಡಿ, ಅಂಗುಲಿಮಾಲಾ, ವಾಲ್ಮೀಕಿ ಅವರು ಮನಃ ಪರಿವರ್ತನೆಗೊಂಡ ಮಹಾನ್ ಸಾಧನೆ ಕೈಗೊಂಡ ಬಗ್ಗೆ ಕಾರಾಗೃಹದ ಬಂದಿಗಳಿಗೆ ಮನಃ ಪರಿವರ್ತನೆ ಕೈಗೊಳ್ಳುವಂತೆ ಮನ ಮುಟ್ಟುವಂತರ ತಿಳಿ ಹೇಳಿದರು. ಸರ್ಕಾರವು ಬಂದಿಗಳ ಮನಃ ಪರಿವರ್ತನೆಗಾಗಿ ನೀಡಿರುವ ಸೌಲಭ್ಯಗಳಾದ ಲೈಬ್ರರಿ, ವಿವಿಧ ಕರಕುಷಲಗಳ ಕಾರ್ಯಕ್ರಮದ ಸೌಲಭ್ಯಗಳನ್ನು ಸದ್ಭಳಕೆಯಿಂದ ಉಪಯೋಗಿಸಿಕೊಂಡು, ಸಮಾಜದ ಮುಖ್ಯ ವಾಹಿನಿಯಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು. ಅಂಗುಲಿಮಾಲಾ, ಶ್ರೀ ವಾಲ್ಮೀಕಿರವರ ಜೀವನವನ್ನು ಅದರ್ಶವಾಗಿ ತೆಗೆದುಕೊಂಡು ಸಮಾಜದಲ್ಲಿ ಉತ್ತಮವಾಗಿ ಬದುಕಿ ಎಂದು ಬಂದಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಅಧೀಕ್ಷಕರಾದ ಶಹಾಬುದ್ದೀನ್ ಕಾಲೇಖಾನ್ ಮಾತನಾಡಿ, ಬುದ್ಧಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ, ಸಂಗಂ ಶರಣಂ ಗಚ್ಛಾಮಿ ಭಗವಾನ್ ಬುದ್ಧನ ಜೀವನ ಮೌಲ್ಯಗಳನ್ನು ಬಂದಿ ನಿವಾಸಿಗಳಿಗೆ ತಿಳಿಸಿ ತಾವೂ ಕೂಡಾ ಬುದ್ಧನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿ, ಪಂಡಿತ ಜವಾಹರಲಾಲ ನೆಹರು, ಬಾಲಗಂಗಾಧರ ತಿಲಕ, ಜಿ.ಕೆ. ಗೋಕಲೆರವರೆಲ್ಲರೂ ಜೈಲಿಗೆ ಬಂದದ್ದು ಒಳ್ಳೆಯ ಕಾರಣಕ್ಕೆ ಎಂದು ತಿಳಿಸಿದರು.

ಬಾಗಲಕೋಟೆಯ 2 ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜಶೇಖರ ತಿಳಿಗಂಜಿ, ವೈದ್ಯಾಧಿಕಾರಿ ಡಾ. ನೀಲಾ ಕಾಶಿನಕುಂಟಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಾರಾಗೃಹ ರಾಯಚೂರಿಗೆ ವರ್ಗಾವಣೆಗೊಂಡ ಜೈಲರ್‌ರಾದ ವೆಂಕಟೇಶ ಹಾಗೂ ಬೇರೆ ಕಾರಾಗೃಹಗಳಿಂದ ನೂತನವಾಗಿ ವರ್ಗಾವಣೆಗೊಂಡು ವರದಿ ಮಾಡಿಕೊಂಡ ಸಿಬ್ಬಂದಿಗಳಿಗೆ ಮತ್ತು ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾರಾಗೃಹದ ಬಂದಿಗಳಿಗೆ ಮನರಂಜನೆ ಕಾರ್ಯಕ್ರಮ ನೀಡಲು ಆಗಮಿಸಿದ ಹುಬ್ಬಳ್ಳಿಯ ವಿವಿಧ ಎನ್.ಜಿ.ಓ ರವರಿಗೆ ಸಂಸ್ಥೆಯ ಪರವಾಗಿ ಗೌರವಾನ್ವಿತರಿಂದ ಸನ್ಮಾನಿಸಲಾಯಿತು. ಉತ್ತಮವಾಗಿ ಸ್ವಚ್ಛತೆ ಕೆಲಸವನ್ನು ನಿರ್ವಹಿಸಿದ ಬಂದಿಗಳಿಗೆ ಬಹುಮಾನ ವಿತರಿಸಲಾಯಿತು. ಬಂದಿಗಳಿಗಾಗಿ ಹಮ್ಮಿಕೊಂಡ ಚೆಸ್, ಕ್ಯಾರಮ್ ಸ್ಪರ್ಧೆಯಲ್ಲಿ ವಿಜೇತರಾದ ಬಂಧಿಗಳಿಗೆ ಮುಖ್ಯ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬಂಧಿಗಳು ಹಾಜರಿದ್ದರು. ಲಕ್ಷ್ಮಿ ಗುಂಡ್ಲೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವರದಿ ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!