ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಜರುಗಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಶೀಲ್ದಾರ್ ಗೌಸಿಯಾ ಬೇಗಂ ಅವರು ರಾಷ್ಟ್ರ ಧ್ವಜರೋಹಣ ಮಾಡಿದರು.

ನಂತರ ಮಾತನಾಡಿ ಬ್ರಿಟೀಷ್ ವಸಾಹತು ಶಾಹಿಯಿಂದ ನಮ್ಮ ಮಾತೃಭೂಮಿಯನ್ನು ಬಿಡಿಸಲು ಹೋರಾಡಿ ತ್ಯಾಗ ಬಲಿದಾನಗೈದ ಹೋರಾಟಗಾರರು, ಅಸಂಖ್ಯಾತ ವೀರ ಚೇತನರನ್ನು ಸ್ಮರಿಸುವ ಸುದಿನ ಸ್ವಾತಂತ್ರ್ಯ ದಿನಾಚರಣೆಯಾಗಿದೆ.
ಭಾರತ ಸರ್ಕಾರವು ಲಿಂಗ ಅಸಮಾನತೆಯನ್ನು ತೊಲಗಿಸಲು ಪ್ರಜಾಪ್ರಭುತ್ವವನ್ನು ರಚಿಸಲಾಗಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಸಂವಿಧಾನವು ಮಹಿಳೆಯ ಏಳ್ಗೆಗೆಗೆ ಆಧಾರವಾಗಿದೆ. ಅದರಂತೆ ಇನ್ನುಳಿದ ಮಹಿಳೆಯರು ಪ್ರಗತಿಯನ್ನು ಹೊಂದಬೇಕೆಂದರು. ಶಾಸಕ ಬಿ.ಎಮ್.ನಾಗರಾಜ ಅವರು ಮಾತನಾಡಿ ಈ ಹಿಂದೆ ತಾಲೂಕಿನಲ್ಲಿ ಅನೇಕ ಪ್ರಗತಿ ಕಾರ್ಯಗಳನ್ನು ಮಾಡಲಾಗಿದೆ.
ಅದರಂತೆ ಈ ಸಲವು ಅನೇಕ ಸವಾಲುಗಳಾದ ಶಿಕ್ಷಣ ಇಲಾಖೆಯಲ್ಲಿ ಕಟ್ಟಡ, ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ, ರಸ್ತೆ ಕಾಮಗಾರಿಯಲ್ಲಿ ಬಹಳಷ್ಟು ಪ್ರಗತಿಯನ್ನು ಸಾಧಿಸಬೇಕಿದ್ದು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಮಕ್ಕಳ ಡೊಳ್ಳು ಕುಣಿತ, ದೇಶ ಭಕ್ತಿಯ ಹಾಡುಗಳಿಗೆ ಮಕ್ಕಳು ನೃತ್ಯಗೈದರು. ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾ ಮೂರ್ತಿ, ಪೋಲೀಸ್ ಉಪ ಅಧೀಕ್ಷಕರಾದ ಡಾ.ಸಂತೋಷ್ ಚವ್ಹಾಣ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಪವನ್‌ಕುಮಾರ್ ಎಸ್.ದಂಡಪ್ಪನವರ್, ಪೌರಾಯುಕ್ತ ಗಂಗಾಧರ, ಕ್ಷೇತ್ರ ಶಿಕ್ಷಣಾಧಿಕಾರಿ ಗುರ‍್ರಪ್ಪ, ನಗರಸಭೆ ಸದಸ್ಯರು, ಇನ್ನಿತರ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




