ನಿಪ್ಪಾಣಿ: ತಾಲೂಕಿನ ಬೇಡಕಿಹಾಳ ಗ್ರಾಮದ ಕುಸುಮಾವತಿ ಮಿರಜಿ ಕಲಾ, ವಾಣಿಜ್ಯ ಮಹಾ ವಿದ್ಯಾಲಯ ದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಾರಂಭದಲ್ಲಿ ಎನ್ ಸಿ ಸಿ ವಿದ್ಯಾರ್ಥಿಗಳಿಂದ ಮಾನವನದನೆಯೊಂದಿಗೆ ಅತಿಥಿಗಳನ್ನು ವೇದಿಕೆಗೆ ಸ್ವಾಗತಿಸಲಾಯಿತು. ಈ ಸಂಧರ್ಭದಲ್ಲಿ ಹಿರಿಯ ನ್ಯಾಯವಾದಿ ಬ್ರಿಜೇಶ್ ಶಾಸ್ತ್ರಿ ಧ್ವಜಾರೋಹಣ ಮಾಡಿದರು.
ನಿವೃತ್ತ್ ಕಾರ್ಯಕಾರಿ ಅಭಿಯಂತರರಾದ ಸುನೀಲಕುಮಾರ ಬಲ್ಲೋಳ ಪ್ರತಿಮೆ ಪೂಜೆ ಮಾಡಿದರು. ಧ್ವಜಾರೋಹಣ ಸಮಾರಂಭ ದಲ್ಲಿ ಲಟ್ಟೆ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಇಂದ್ರಜಿತ್ ಪಾಟೀಲ ಉಪಾಧ್ಯಕ್ಷ ಜಯಕುಮಾರ ಖೋತ, ಸಂಚಾಲಕರಾದ ತಾತ್ಯಾಸಾಹೇಬ್ ಚೌಗುಲೆ, ಸಚಿನ್ ಖೋತ, ನಿಖಿಲ್ ಖೋತ, ಅಪ್ಪಸಾಬ ಬೇಡಗೆ, ಬಾಹುಬಲಿ ಶಿರಗುಪ್ಪೆ, ಪ್ರಾಂಶುಪಾಲ ಡಾ. ಕಿರಣ ಚೌಗುಲೆ, ಗೋಪಾಲ ಮಹಾಮುನಿ, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




