ಗುಳೇದಗುಡ್ಡ : ಪ್ರತಿಯೊಬ್ಬರು ಒಂದಡೇ ಸೇರಿಕೊಂಡು ತಮ್ಮ ಜೀವನ ಸಾಗುಸುತ್ತಿದ್ದು, ಎಷ್ಟೇ ಎತ್ತರಕ್ಕೆ ಬೆಳದರೂ ವಿದ್ಯೆ ಕಲಿಸಿದ ಶಿಕ್ಷಕರಿಗೆ ಗುರು ಸ್ಮರನೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೇಯ. ಗುರು ಮತ್ತು ಶಿಷ್ಯರ ಅವಿನಾಭಾವ ಸಂಭAದ ಹೊಂದಿದೆ. ಎಂದು ಗುರುಸಿದ್ದೇಶ್ವರ ಮಠದ ಶ್ರೀ ಜ. ಗುರುಸಿದ್ದ ಪಟ್ಟದಾರ್ಯ ಸ್ವಾಮಿಗಳು, ಹೇಳಿದರು.
ಪಟ್ಟಣದ ಸರಸ್ವತಿ ವಿದ್ಯಾಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ೧೯೯೦-೯೭ ನೇ ಸಾಲಿನಲ್ಲಿ ಅಧ್ಯಯನ ಮಾಡಿದ ಹಳೇಯ ವಿದ್ಯಾರ್ಥಿಗಳ ಏರ್ಪಡಿಸಿದ್ದ ಗುರುವಂದನಾ ಹಾಗೂ ಸ್ನೇಹ್ನ ಸಮ್ಮೇಳನ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದರು ಶಿಷ್ಯನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಕರೆದೂಯ್ಯುವವರೇ ಗುರು ಎಂದರು.
ಮುರುಘಾಮಠದ ಶ್ರೀ ಕಾಶಿನಾಥ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಶಿಕ್ಷಕಿಯರು ಸುಮತಿ ಹೆಗಡೆ, ಮಾತನಾಡಿ ಎಲ್ಲರನ್ನು ಒಂದುಗೊಡಿಸಿ ಕಾರ್ಯಕ್ರಮವನ್ನು ಮಾಡುವುದು ಸುಲಭವಲ್ಲ ತುಂಬಾ ಸಾಹಸದ ಕೆಲಸ ಮಾಡಿದಿರಿ, ಆಗೇ ನಮ್ಮ ಕಡೆ ಕಲಿತ ಎಲ್ಲಾ ಬ್ಯಾಂಚಿನ ಹಳೇ ವಿದ್ಯಾರ್ಥಿಗಳು ನಾವು ಒಂದು ಕಡೆ ಸೇರಿ ಕಾರ್ಯಕ್ರಮ ಮಾಡಿದರೆ ಚನ್ನಾಗಿರುತ್ತದೆ. ಈ ಹಿಂದೆ ನಾವೇಲ್ಲ ಶಿಕ್ಷಕರು ಕಠಿಣ ಶಿಕ್ಷೆ ನೀಡುತ್ತಲೇ ಶಿಕ್ಷಣ ನೀಡಿ ಅಷ್ಟೇ ಪ್ರೀತಿಯಿಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವು ಪಾಲಕರು ಸಹ ನಮಗೆ ಸಹಕಾರ ನೀಡುತ್ತಿದ್ದರು. ಇಂದು ಮೃದವಾಗಿ ಶಿಕ್ಷಣ ನೀಡಬೇಕಾಗಿದೆ ಎಂದರು.
ಗುರುಗಳಾದ ಸುಮತಿ ಹೆಗಡೆ, ಸುಮನಾ ನಾಯಕ, ಪ್ರಮೀಳಾ ಮುದ್ದಾಪೂರ, ಜಮುನಾ ಮಾದರ, ರಾಜೇಶ್ವರಿ ಕವಡಿಮಟ್ಟಿ, ಭಾರತಿ ತಾಂಡರು, ನಾಗರಾಜ ವಡ್ಡರ್, ಪೇಟರ್ ಬೆಟಗೇರಿ, ಶೇಖಮ್ಮ ಸೇರಿದಂತೆ ಈಗಿನ ಶಾಲೆಯ ಮುಖ್ಯಗುರುಗಳಾದ ಪರಶುರಾಮ ಬತಲ್ ರವರಿಗೆ ಗುರುವಂದನೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು. ಹಳೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ತಮ್ಮ ಶಾಲೆಯ ಅನಿಸಿಕೆಗಳನ್ನು ಹೇಳಿದರು.
ಬಳಿಕ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಹಾಸ್ಯ ಕಾರ್ಯಾಕ್ರಮ ನಡೆಸಿದರು.
ವಿದ್ಯಾ ಸಂಸ್ಥೆಯ.ಶಾಲೆಯ ಗುರುಗಳು ವಿವೇಕಾನಂದ ದೇವಾಂಗಮಠ, ಎಮ್.ಎಸ್. ಶೀಪ್ರಿ, ಸಂಗಮೇಶ ಶೇಖಾ, ರವರು ಭಾಗವಹಿಸುವುರು.
ವರದಿ: ಮಾಹಲಿಂಗೇಶ ಯಂಡಿಗೇರಿ