ಬೆಳಗಾವಿ: ಹೌದು ಬೆಳಗಾವಿ ವೃತ್ತ ಕಚೇರಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಭಾರೆ ಅಧೀಕ್ಷಕ ಅಭಿಯಂತರರು ಆಗಿದ್ದ ಹಾಲಿ ಬೆಳಗಾವಿ ವಿಭಾಗದ ಕಾರ್ಯ ನಿರ್ವಾಹಕರ ಅಭಿಯಂತರರು ಆದ ಶಶಿಕಾಂತ ನಾಯಕ್ ಅವರ ವಯೋ ಸರ್ಕಾರಿ ಸೇವಾ ನಿವೃತ್ತಿ ನಿಮಿತ್ಯ ನಿನ್ನೆ ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದ ರಾಹುಲ್ ಶಿಂದೆಯವರ ಮುಖ್ಯ ಉಪಸ್ಥಿತಿಯಲ್ಲಿ, ಹೊಸದಾಗಿ ಕಾರ್ಯ ನಿರ್ವಾಹಕ ಅಭಿಯಂತರರಾಗಿ ನಿಯೋಜನೆಗೊಂಡ ಅಧ್ಯಕ್ಷತೆ ವಹಿಸಿದ ಕಿರಣ್ ಘೋರ್ಪಡೆ, ಹಿರಿಯ ನಿವೃತ್ತಿ ಅಭಿಯಂತರರು ಆದ ಶ್ರೀ ಬನಗಾರ, ಹಿರಿಯ ಅಭಿಯಂತರರು ಆದ ಎಸ್.ಎಸ್ ಸೊಬರದ, ಎಸ್.ಬಿ ಕೋಳಿ, ಪಾಂಡುರಂಗ, ಮಠಪತಿ, ಆರ್.ಬಿ ಮರಾಟೆ ಸೇರಿದಂತೆ ಎಲ್ಲಾ ಇಲಾಖೆಗಳ ಅಭಿಯಂತರರು ಹಾಗೂ ಸಿಬ್ಬಂದಿಗಳು ಸನ್ಮಾನ ಮಾಡುವುದರ ಮೂಲಕ ಅದ್ದೂರಿಯಾಗಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತಿಯಾದ ಇಂಜಿನಿಯರ್ ಶಶಿಕಾಂತ ನಾಯಕ್ ಅವರ ಕಾರ್ಯವೈಖರಿ ಬಗ್ಗೆ ಸಿ.ಇ. ಓ ರಾಹುಲ್ ಶಿಂದೆಯವರು ಹಾಗೂ ವಿವಿಧ ಇಲಾಖೆಗಳ ಅವರ ಬಗ್ಗೆ ಶ್ಲಾಘನೀಯ ಮಾತುಗಳನ್ನು ಆಡಿ ಹೃದಯಪೂರ್ವಕವಾಗಿ ಸನ್ಮಾನ ಮಾಡಿ ಸತ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಬೀಳ್ಕೊಡುಗೆ ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಇಂಜಿನಿಯರ್ ಶಶಿಕಾಂತ ನಾಯಕ್ ಅವರ ವೃತ್ತಿ ಜೀವನದ ನೆನಪುಗಳನ್ನು ಮೆಲುಕು ಹಾಕಿ ಎಲ್ಲರಿಗೂ ಸಹ ಧನ್ಯವಾದಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ನೀರಾವರಿ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಗಳ ಅಭಿಯಂತರರು ಹಾಗೂ ಸಿಬ್ಬಂದಿಗಳು, ಅವರ ಧರ್ಮ ಪತ್ನಿ, ಹಾಗೂ ಮಕ್ಕಳು ಉಪಸ್ಥಿತರಿದ್ದರು. ಒಟ್ಟಾರೆ ಅಥಣಿಯ ಮಣ್ಣಿನ ಶ್ರೇಷ್ಠ ಇಂಜಿನಿಯರ್ ಶಶಿಕಾಂತ ನಾಯಕ್ ಅವರನ್ನು ಸರ್ಕಾರಿ ಸೇವೆಯಿಂದ ಅದ್ದೂರಿಯಾಗಿ ಬೀಳ್ಕೊಡಲಾಯಿತು.




