ಇಲಕಲ್: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕತ್ತರಿಸಿದಪ್ರಕರಣಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಜನಿವಾರ ಧರಿಸುವ ಸಮಾಜಗಳ ಒಕ್ಕೂಟವು ರ‍್ಯಾಲಿಯನ್ನು ಏರ್ಪಡಿಸಿತ್ತು. ನಗರದ ವೆಂಕಟೇಶ ದೇವಸ್ಥಾನದಿಂದ ಆರಂಭವಾದ ರ್‍ಯಾಲಿಯಲ್ಲಿ ವಿವಿಧ ಸಮಾಜಗಳ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಶಾಂತಿಯುತವಾಗಿ ನಡೆದ ಮೆರವಣಿಗೆಯಲ್ಲಿ ಸನಾತನ ಧರ್ಮದ ಪರವಾಗಿ ಘೋಷಣೆಗಳನ್ನು ಕೂಗಲಾಯಿತು. ವೆಂಕಟೇಶ ದೇವಸ್ಥಾನದಲ್ಲಿ ಮಂಗಳಾರತಿಯ ಮೂಲಕ ಆರಂಭವಾದ ರ‍್ಯಾಲಿಯಲ್ಲಿ ಭಾಗವಹಿಸಿದ ಎಲ್ಲ ಸಮಾಜಗಳ ನೇತಾರರನ್ನು ಕೇಸರಿ ಶಾಲು ಹಾಕಿ ಗೌರವಿಸಲಾಯಿತು. ಜನಿವಾರ ಧರಿಸುವ ಸಮಾಜಗಳ ಒಕ್ಕೂಟದ ಸಂಚಾಲಕರಾದ ಪಾಂಡುರಂಗ ಕುಲಕರ್ಣಿ ಅವರು ಈ ರ‍್ಯಾಲಿಯ ನೇತೃತ್ವವನ್ನು ವಹಿಸಿದ್ದರು.

ಮಾರ್ಗದುದ್ದಕ್ಕೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಉರಿಬಿಸಿಲನ್ನು ಸೋಲಿಸಿದರು. ಮಹಿಳೆಯರು ಕೂಡಾ ಸನಾತನ ಧರ್ಮದ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಎಲ್ಲರಿಗಿಂತ ಮುಂದಿದ್ದರು. ನಾರಾಯಣಾಚಾರ್ಯ ಪೂಜಾರ, ಟಿ.ಎಚ್. ಕುಲಕರ್ಣಿ, ಕೆ.ವಿ. ಸಂಗಮ, ರಮೇಶ ಕುಲಕರ್ಣಿ, ಅಕಬ್ರಾಮಸ ಪ್ರತಿನಿಧಿ ಗುರುರಾಜ ಗೊಂಬಿ, ಮಾಧವ ಮಾಹುಲಿ, ಎಂ.ಎಸ್. ಜೋಶಿ, ಅರುಣ ದೇಸಾಯಿ ಮುಂತಾದ ಹಿರಿಯರು ರ‍್ಯಾಲಿಯನ್ನು ಮುನ್ನಡೆಸಿದರು.
ಕಂಠಿ ಸರ್ಕಲ್‍ನಲ್ಲಿ ಕೊನೆಗೊಂಡ ರ‍್ಯಾಲಿಯು ಬಹಿರಂಗ ಸಭೆಯಾಗಿ ಮಾರ್ಪಟ್ಟಿತು. ಎಸ್. ಆರ್. ಕಂಠಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಇತ್ತೀಚೆಗೆ ಕಾಶ್ಮೀರದಲ್ಲಿ ಹತರಾದ ಹಿಂದು ಮೃತ ಕುಟುಂಬಗಳಿಗೆ ಸಾಂತ್ವನ ಸೂಚಿಸಿ ಮೃತರ ಸಲುವಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ಮಾತನಾಡಿದ ಬಿ.ಆರ್.ಕಟ್ಟಿಯವರು ಜನಿವಾರವು ಯಜ್ಞೋ ಪವೀತವೆನಿಸಿದ್ದು ತುಂಬಾ ಪವಿತ್ರವಾಗಿದೆ. ಕಾನೂನುಬಾಹಿರವಾಗಿ ಜನಿವಾರವನ್ನು ಕತ್ತರಿಸಿದ ಘಟನೆಯು ಅಮಾನವೀಯವಾಗಿದೆ ಎಂದು ಹೇಳಿ ಎಲ್ಲ ಜನಿವಾರಧಾರಿ ಪರಿವಾರಗಳ ಪರವಾಗಿ ಪ್ರತಿಭಟನೆ ಸೂಚಿಸಿದರು. ಒಕ್ಕೂಟದ ಸಂಚಾಲಕರಾದ ಪಾಂಡರಂಗ ಕುಲಕರ್ಣಿ ಅವರು ಸಭೆಗೆ ಮನವಿಯನ್ನು ಓದಿ ಹೇಳಿದರು.
ಸ್ಥಳದಲ್ಲಿ ಹಾಜರಿದ್ದ ಉಪ ತಹಶೀಲದಾರ ಈಶ್ವರ ಗಡ್ಡಿ ಅವರಿಗೆ ಒಕ್ಕೂಟದ ಪರವಾಗಿ ಮನವಿಯನ್ನು ಅರ್ಪಿಸಲಾಯಿತು.
ರ‍್ಯಾಲಿಯಲ್ಲಿ ದೇವಾಂಗ ಸಂಘದ ಅಧ್ಯಕ್ಷರಾದ ಅಶೋಕ ಬಿಜ್ಜಳ, ಮಲ್ಲಿಕಾರ್ಜುನ ಇಂದರಗಿ, ಪಂಪಣ್ಣ ಕಾಳಗಿ, ಸುಗೂರೇಶ ನಾಗಲೋಟಿ, ಸ್ವಕುಳಸಾಳಿ ಸಮಾಜದ ಅಧ್ಯಕ್ಷರಾದ ನಾರಾಯಣಪ್ಪ ದಿವಟೆ, ಗುರುದತ್ತ ಗುಳೇದ, ಪದ್ಮಸಾಳಿ ಸಮಾಜದ ಅಧ್ಯಕ್ಷರಾದ ಲಕ್ಷ್ಮಣ ಗುರಂ, ಎಸ್ಎಸ್‍ಕೆ ಸಮಾಜದ ಅಧ್ಯಕ್ಷರಾದ ಏಕನಾಥಸಾ ರಾಜೊಳ್ಳಿ, ಮಾಹೇಶ್ವರಿ ಸಮಾಜದ ಅಧ್ಯಕ್ಷರಾದ ಶಾಮಸುಂದರ ಡಾಗಾ, ಪುರುಷೋತ್ತಮ ದರಕ, ಸುರೇಶ ಕರವಾ, ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಕೃಷ್ಣಾಜಿ ಮಹೇಂದ್ರಕರ, ಪ್ರಶಾಂತ ಹಂಚಾಟೆ, ತೊಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ನಾರಾಯಣಪ್ಪ ಕಂದಿಕೊAಡ, ಆರ್ಯವೈಶ್ಯ ಸಮಾಜದ ಅಧ್ಯಕ್ಷರಾದ ಕುಮಾರ, ಮುತ್ತಣ್ಣ ಬೆಂಗಳೂರ, ಮರಾಠಾ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ನಾಗರಾಜ ಕೋರೆನವರ, ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ರಾಮಣ್ಣ ಮರೋಳ, ವೀರಭದ್ರಪ್ಪ ಹಿಪ್ಪರಗಿ, ಜಿತೇಂದ್ರ ಬಡಿಗೇರ, ನಾರಾಯಣ ಹೂಲಗೇರಿ, ಮುತ್ತರ್ಣಣ ಐಹೊಳೀ, ಮನೋಹರ ನಾಲತವಾಡ, ಹಿಂದು ದೈವಜ್ಞ ಬ್ರಾಹ್ಮಣ ಸಮಾಜದ ಹರೀಶ ವೆರ್ಣೇಕರ, ಚಿತ್ರಗಾರ ಸಮಾಜದ ಅಶೋಕ ಚಿತ್ರಗಾರ, ಬಾಲಕೃಷ್ಣ ಚಿತ್ರಗಾರ ಅಲ್ಲದೇ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷ ಗೋಪಾಲ ಢಗೆ, ಪರಶುರಾಮ ಕುಂಬಾರ, ಕಪಿಲಕುಮಾರ ಮುಂತಾದವರು ಭಾಗವಹಿಸಿದ್ದರು.
ಬ್ರಾಹ್ಮಣ ಯುವಕ ಸಂಘದ ಗಿರಿಧರ ದೇಸಾಯಿ, ರಾಘವೇಂದ್ರ ಕುಲಕರ್ಣಿ, ಗೋಪಾಲ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಮಹೇಶ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಪ್ರಕಾಶ ಗೊಂಬಿ, ಸಂತೋಷ ಸರಾಫ, ವೆಂಕಟೇಶ ಪೂಜಾರ, ಸಮೀರ, ಜೋಶಿ, ಗುರುರಾಜ ದೇಶಪಾಂಡೆ, ಗಿರೀಶ ಜೋಶಿ, ಶ್ರೀಕಾಂತ ಪೂಜಾರ ಮುಂತಾದವರು ರ್ಯಾಲಿ ಉಸ್ತುವಾರಿ ವಹಿಸಿದ್ದರು. ದೇವಾಂಗ ಸಂಘದವರು ಎಲ್ಲರಿಗೂ ತಂಪಾದ ಪಾನೀಯ ವ್ಯವಸ್ಥೆ ಮಾಡಿದ್ದರು.
ವರದಿ: ದಾವಲ್ ಶೇಡಂ