Ad imageAd image

ಕನ್ನಡ ತೇರೆಳೆಯಲು ಗಡಿಗ್ರಾಮ ಕಾರದಗಾ ಸಜ್ಜು ಜ.19 ರಂದು 7 ನೇ ಕನ್ನಡ ಸಮಾವೇಶ.

Bharath Vaibhav
ಕನ್ನಡ ತೇರೆಳೆಯಲು ಗಡಿಗ್ರಾಮ ಕಾರದಗಾ ಸಜ್ಜು ಜ.19 ರಂದು 7 ನೇ ಕನ್ನಡ ಸಮಾವೇಶ.
WhatsApp Group Join Now
Telegram Group Join Now

ನಿಪ್ಪಾಣಿ:  ಬರುವ ಜನವರಿ 19ರಂದು ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಕಾರದಗಾ ಲ್ಲಿ ಏಳನೇ ಕನ್ನಡ ಸಮಾವೇಶ ಧರ್ಮಸ್ಥಳ ಧರಮಾಧಿಕಾರಿ ಡಾಕ್ಟರ್ ವೀರೇಂದ್ರ ಹೆಗಡೆಯವರ ಆಶೀರ್ವಾದದಿಂದ ಡಿ ಸುರೇಂದ್ರ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡಿ ತಿಳಿಸಿದರು.

ಅವರು ಕಾರ್ಯದ ಗ್ರಾಮದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಸಮಾವೇಶದ ಕುರಿತು ಅಧಿಕ ಮಾಹಿತಿ ನೀಡಿದ ಅವರು ಚಿಕ್ಕೋಡಿಯ ಸಂಪಾದನೆ ಮಹಾಸ್ವಾಮಿಗಳು ಅಮರೇಶ್ವರ ಹಾಗೂ ಸದಲಗಾ ಪಟ್ಟನದ ದರೀಖಾನ. ಅಜ್ಜ ನವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬೆಳಿಗ್ಗೆ ವಿವಿಧ ಜಾನಪದ ಕಲಾತಂಡಗಳ ಉಪಸ್ಥಿತಿಯಲ್ಲಿ ರೂಪಕಗಳು ಶೃಂಗರಿಸಿದ ರಥದಲ್ಲಿ ಹೆಗಡೆ ದಂಪತಿಗಳು ತಾಯಿ ಭುವನೇಶ್ವರಿ ಮೆರವಣಿಗೆ ನಡೆಯಲಿದೆ. ಮೂರು ಹಂತಗಳಲ್ಲಿ ನಡೆಯುವ ಸಮಾವೇಶದಲ್ಲಿ ಹತ್ತರಂದು ಬೆಳಿಗ್ಗೆ ಸಮ್ಮೇಳನ ಉದ್ಘಾಟನೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ.

ಅವರು ನೆರವೇರಿಸಲಿದ್ದು ಪ್ರಕಾಶ ಹುಕ್ಕೇರಿ ಯವರ ಹಸ್ತದಿಂದ ದೀಪ ಪ್ರಜ್ವl ಗಣೇಶ ಹುಕ್ಕೇರಿ ಯವರಿಂದ ಪ್ರತಿಮೆ ಪೂಜೆ ಚೆನ್ನರಾಜ ಹಟ್ಟಿ ಹೊಳಿ ಯುವರಿಂದ ಗ್ರಂಥ ಬಿಡುಗಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಪ್ರತಿಭಟ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ ಒಟ್ಟು ಮೂರು ಹಂತಗಳಲ್ಲಿ ನಡೆಯಲಿರುವ ಕನ್ನಡ ಸಮಾವೇಶದಲ್ಲಿ ಕವಿಗೋಷ್ಠಿ, ಸಮಾರೋಪ ಸಮಾರಂಭ ನಡೆಯಲಿದೆ ಸುದ್ದಿಗೋಷ್ಠಿ ಯಲ್ಲಿ ಶಾಂತಲಾ ಮಾನಿಕ ಚಂದಗಡೆ ಮಾತನಾಡಿದರು. ಮಹಾವೀರ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ವರದಿ : ಮಹಾವೀರ ಚಿಂಚನೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!