ಚಿಕ್ಕೋಡಿ :ಪಟ್ಟಣದ ರಸ್ತೆ-ಚರಂಡಿ ನಿರ್ಮಾಣಕ್ಕೆ 8.30 ಕೋಟಿ ರೂ ಅನುದಾನ ಮಂಜೂರು:ಪ್ರಕಾಶ ಹುಕ್ಕೇರಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ೮.೩೦ ಕೋಟಿ ರೂ ಅನುದಾನ ಮಂಜೂರಾಗಿದೆ. ಬರುವ ಎರಡು ತಿಂಗಳ ಒಳಗಾಗಿ ಅಭಿವೃದ್ಧಿ ಕಾಮಗಾರಿಗಳ ಕೆಲಸ ಮುಕ್ತಾಯ ಮಾಡಬೇಕೆಂದು ಕರ್ನಾಟಕ ದೆಹಲಿ ಪ್ರತಿನಿಧಿ-೨ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ಪಟ್ಟಣದ ಅಲ್ಪಸಂಖ್ಯಾತ ಕಾಲೋನಿ ವ್ಯಾಪ್ತಿಯಲ್ಲಿ ಮಂಜೂರಾದ ೧.೫೦ ಕೋಟಿ ರೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚಿಕ್ಕೋಡಿ ಪಟ್ಟಣದ ನಾಗರಿಗೆ ಅನುಕೂಲವಾಗಲು ಗುಣಮಟ್ಟದ ರಸ್ತೆ, ಚರಂಡಿ ನಿರ್ಮಾಣವಾಗಲು ರಾಜ್ಯ ಸರ್ಕಾರ ಅಲ್ಪಸಂಖ್ಯಾತ ಕಾಲೋನಿಗಳಾದ ಝಾರಿಗಲ್ಲಿ, ಭೇಪಾರಿಗಲ್ಲಿ, ಮಕಾನದಾರ ಗಲ್ಲಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ ನಂಬರ ೪,೧೨ ಮತ್ತು ೬ ರಲ್ಲಿ ಬರುವ ಬಾರಾ ಇಮಾಮಗಲ್ಲಿ, ಹೊಸಪೇಠಗಲ್ಲಿ, ಮಕಾನಾದರ ಗಲ್ಲಿ ರಸ್ತೆ ನಿರ್ಮಾಣ, ವಾರ್ಡ ನಂಬರ ೭,೧೬ ಮತ್ತು ೧೭ ರಲ್ಲಿ ಬರುವ ಪ್ರಭುವಾಡಿ, ಸೈಯದಗಲ್ಲಿ, ರಾಮನಗರರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ವಾರ್ಡ ನಂಬರ ೮.೧೪ ಮತ್ತು ೧೫ರಲ್ಲಿ ಬರುವ ಇಂದಿರಾ ನಗರ, ಭೇಪಾರಿಗಲ್ಲಿ ರಸ್ತೆ ನಿರ್ಮಾಣಕ್ಕೆ ೧.೫೦ ಕೋಟಿ ರೂ ಅನುದಾನ ಮಂಜೂರಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಪಟ್ಟಣದ ವಿವಿಧ ವಾರ್ಡಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ೨ ಕೋಟಿ ರೂ ಅನುದಾನ ಮಂಜೂರಾಗಿದೆ. ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆಯಿಂದ ಪಟ್ಟಣದ ಅಭಿವೃದ್ಧಿಗೆ ೪ ಕೋಟಿ ರೂ ಅನುದಾನದ ಕೆಲಸ ಪ್ರಗತಿಯಲ್ಲಿದೆ. ಲೋಕೋಪಯೋಗಿ ಇಲಾಖೆಯ ಅಂಪೇಡಿಕ್-ಇದಲ್ಲಿ ಅಂಕಲಿಕೂಟದಿಂದ ಝಾರಿಗಲ್ಲಿಯವರೆಗೆ ಡಾಂಬರೀಕರಣ ಮಾಡಲು ೮೦ ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದರು.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಅವರು ಅನುದಾನ ಒದಗಿಸುತ್ತಿದ್ದಾರೆ. ಶಾಸಕ ಗಣೇಶ ಹುಕ್ಕೇರಿ ಸರ್ಕಾರದಿಂದ ಅನುದಾನ ತಂದು ಕ್ಷೇತ್ರವನ್ನು ಪ್ರಗತಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಇರ್ಪಾನ ಭೇಪಾರಿ, ಪುರಸಭೆ ಸದಸ್ಯರಾದ ಗುಲಾಬ ಬಾಗವಾನ, ಅನೀಲ ಮಾನೆ, ವಿನೋಧ ಮಾಳಗೆ, ಮಾಜಿ ಸದಸ್ಯರಾದ ಪಿ.ಐ.ಕೋರೆ, ನರೇಂದ್ರ ನೇರ್ಲಿಕರ, ನ್ಯಾಯವಾದಿ ಸತೀಶ ಕುಲಕರ್ಣಿ, ಬಾಬು ಸಮ್ಮತ್ತಶೆಟ್ಟಿ, ಸಂದೀಪ ಶೆರಖಾನೆ, ಸಿದ್ದು ನಾಯಿಕ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ