ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರಗೊಂಡಿದ್ದು, ಮತ್ತೆ ಪಾಪಿ ಪಾಕಿಸ್ತಾನ ಕಾಲು ಕೆರಳಿ ಇದೀಗ ಶೆಲ್ ದಾಳಿ ನಡೆಸಿದೆ.
ಜಮ್ಮು ಪ್ರದೇಶದ ಆರ್‌ಎಸ್ ಪುರದಲ್ಲಿ ಪಾಕ್ ಸೇನೆಯಿಂದ ಕದನ ವಿರಾಮ ಮತ್ತೆ ಉಲ್ಲಂಘನೆ ಮಾಡಿ ಶೆಲ್ ದಾಳಿ ನಡೆಸಿದೆ.ಘಟನೆಯಲ್ಲಿ ಎಂಟು ಬಿಎಸ್‌ಎಫ್ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇಂದಷ್ಟೇ ಪಾಕ್ನ ಅಪ್ರಚೋದಿತ ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತ, ಪಾಕ್ ನ ಹಲವು ಸೇನಾ ನೆಲೆ ಮೇಲೆ ದಾಳಿ ನಡೆಸಿದೆ. ಅಲ್ಲದೇ ಇನ್ಮುಂದಿನ ಪಾಕ್ ಅಪ್ರಚೋದಿತ ದಾಳಿಯು ಯುದ್ಧಕ್ಕೆ ಸಮಾನ ಎಂದೂ ಭಾರತ ಎಚ್ಚರಿಕೆ ನೀಡಿದ ಮೇಲೂ ಪಾಕಿಸ್ತಾನ ಈ ಶೆಲ್ ದಾಳಿ ನಡೆಸಿದ್ದು, ಭಾರತದ ರಣಭೀಕರ ಉತ್ತರ ನೀಡಲು ಖುದ್ದು ಪಾಕ್ ಆಹ್ವಾನಿಸಿದೆ.




