Ad imageAd image

ದೆಹಲಿ ಕಾರು ಸ್ಫೋಟ ಕೇಸ್ : ಹರಿಯಾಣದಲ್ಲಿ ಇಬ್ಬರು ವೈದ್ಯರು ಸೇರಿ 8 ಜನ ಅರೆಸ್ಟ್

Bharath Vaibhav
ದೆಹಲಿ ಕಾರು ಸ್ಫೋಟ ಕೇಸ್ : ಹರಿಯಾಣದಲ್ಲಿ ಇಬ್ಬರು ವೈದ್ಯರು ಸೇರಿ 8 ಜನ ಅರೆಸ್ಟ್
WhatsApp Group Join Now
Telegram Group Join Now

ನವದೆಹಲಿ : ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಇಬ್ಬರು ವೈದ್ಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ.

ಜೈಶ್ ಎ ಮೊಹ್ಮಮದ್ ಉಗ್ರ ಸಂಘಟನೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಹರಿಯಾಣದ ಫರಿದಾಬಾದ್ ನಲ್ಲಿ ಮುಜಾಮ್ಮಿಲ್, ಇಬ್ಬರು ವೈದ್ಯರು ಸೇರಿ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ IB, NIA, NSG & ಸ್ಥಳೀಯರ ತಂಡವನ್ನು ರಚನೆ ಮಾಡಲಾಗಿದೆ. 500 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ತಂಡದಲ್ಲಿದ್ದಾರೆ.

ದೆಹಲಿಯ ಕೆಂಪು ಕೋಟೆಯ ಬಳಿ i20 ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ 9 ಜನರು ಸಾವನ್ನಪ್ಪಿದ್ದರು.

ಇದೀಗ ಮತ್ತೆ ಮೂವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದು ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ ಇನ್ನು 17 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ಮತ್ತು ಭಯೋತ್ಪಾದನಾ ವಿರೋಧಿ ತಜ್ಞರು ಕುಳಿಗಳು, ಚೂರುಚೂರುಗಳು ಅಥವಾ ಉಂಡೆಗಳ ಅನುಪಸ್ಥಿತಿಯಿಂದ ಗೊಂದಲಕ್ಕೊಳಗಾಗಿದ್ದರು – ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ಫೋಟಗಳಲ್ಲಿ ನಿರೀಕ್ಷಿಸಲಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!