ಸೇಡಂ:- ತಾಲೂಕಿನ ಕಾಚೂರ್ ಗ್ರಾಮದಲ್ಲಿ ನಿನ್ನೆ ಬಂದಿರುವ ಮಳೆಯ ಆರ್ಭಟಕ್ಕೆ ರಾತ್ರಿ ಸಮಯದಲ್ಲಿ ಸರಿ ಸುಮಾರು 8ರಿಂದ 10 ವಿದ್ಯುತ್ ಕಂಬಗಳು ಬಿದ್ದಿವೆ ನಿನ್ನೆ ಬೆಳಿಗ್ಗೆ 11 ಗಂಟೆಯಿಂದ ವಿದ್ಯುತ್ ಜಡಿತಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಅಪಾಯ ಆಗಿಲ್ಲ.
ಸಂಬಂಧಪಟ್ಟ ಅಧಿಕಾರಿಗಳು ಬೆಟಿಕೊಟ್ಟು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಮನವಿ ಆಗಿದೆ.ಅದೇ ರೀತಿಯಲ್ಲಿ ನಿನ್ನೆ ಮಳೆಯ ಅಬ್ಬರಕ್ಕೆ ಕಾಚೋರ್ ಗ್ರಾಮ ಹತ್ತಿರ ಬರುವ ಕಾಗಿನ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿತ್ತು ಅದರಿಂದ ನಿನ್ನೆ ಸೇಡಂ ನಿಂದ ಬರುವ ರಸ್ತೆ ಸ್ಥಗಿತಗೊಂಡಿತ್ತು.
ಆದರೆ ಇವತ್ತು ನೀರು ಕಡಿಮೆಯಾಗಿರುವುದರಿಂದ ವಾಹನ ಸಂಚಾರ ಪ್ರಾರಂಭ ಆಗಿದ್ದು ನದಿ ನೀರಿನ ರಭಸಕ್ಕೆ ಬಂದಿರುವ ಕಸದ ರಾಶಿ ಬ್ರಿಡ್ಜ್ ಪಕ್ಕದಲ್ಲಿನ ಗೋಡೆಗಳಿಗೆ ಸಿಲುಕಿ ರಸ್ತೆಗೆ ಅರ್ಧದಷ್ಟು ಬಂದಿರುತ್ತದೆ.
ಸಂಬಂಧ ಇಲಾಖೆಯ ಅಧಿಕಾರಿಗಳು ಬಂದು ತಕ್ಷಣ ಅದನ್ನು ತಿರುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷರಾದ ದೇವು ಕುಮಾರ್ ನಾಟಿಕಾರ್ ಅವರು ಪತ್ರಿಕಾ ಪ್ರಕಟಣೆ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ವರದಿ:- ವೆಂಕಟಪ್ಪ ಕೆ ಸುಗ್ಗಾಲ್.