ಬೆಳಗಾವಿ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶಿವಪ್ರಿಯ ಕಡೆಚೂರ್ ವಿರುದ್ಧ ತಾಲೂಕಿನ ಅಧಿಕಾರಿಗಳು ಹಾಗೂ ನಿಲಯ ಪಾಲಕರು ನಿಲಯ ಮೇಲ್ವಿಚಾರಕರು ಸಮೇತ ಸುಮಾರು 80 ಜನ ಅಧಿಕಾರಿ ವರ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ನ್ಯಾಯ ಕೊಡಿಸಲು ಮನವಿ ಪಟ್ಟಿಯನ್ನೇ ಮಾಡಿದ್ದಾರೆ ಎಂದು ತಿಳಿದುಬಂದಿದೆ..
ಹೌದು ವೀಕ್ಷಕರೇ. ಬೆಳಗಾವಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶಿವಪ್ರಿಯಾ ಕಡೆಚೂರು ಅವರ ಮೇಲೆ 13 ದೋಷ ಆರೋಪ ಪಟ್ಟಿಯನ್ನು ತಯಾರಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿರುತ್ತಾರೆ
1. ಯಾವ ಸಂದರ್ಭದಲ್ಲಿ ಯಾರ ಮೇಲೆ ಆರೋಪ ಹಾಕಿ ನೋಟಿಸ್ ನೀಡುತ್ತಾರೋ ಅಥವಾ ಅಮಾನತ್ತಿಗೆ ಶಿಫಾರಸು ಮಾಡುತ್ತಾರೋ ತಿಳಿಯುತ್ತಿಲ್ಲ..
2. ವಸತಿ ನಿಲಯಗಳ ನಿರ್ವಹಣೆ ಮಾಡಲು ಸೂಕ್ತ ಮಾರ್ಗದರ್ಶನ ನೀಡುವ ಬದಲಾಗಿ ಅನಾವಶ್ಯಕ ಸಮಸ್ಯೆಗಳನ್ನು ಸೃಷ್ಟಿ ಮಾಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ..
3. ವಸತಿ ನಿಲಯಗಳ ಮಾಸಿಕ ನಿರ್ವಹಣಾ ಬಿಲ್ಲುಗಳು ತಯಾರಿಸಿ ಮೇಲೆ ರುಜುವಿಗೆ ಸಲ್ಲಿಸಿದರೆ ಅನುಮೋದನೆ ನೀಡಿ ಮಾಡುವುದು ತಿಂಗಳಗಟ್ಟಲೆ ಜಿಲ್ಲಾ ಕಚೇರಿಗೆ ಅಲೆದಾಡುವುದು ಮತ್ತು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಹಿಂಸೆ ನೀಡುತ್ತಿರುವುದು
4. ಇವರು ಹೇಳಿದಂತೆ ಒಪ್ಪಿದರೆ ಮಾತ್ರ ಬಿಲ್ಲುಗಳು ತಯಾರಿಸಿ ಮೇಲ್ ರುಜುವಿಗೆ ಸಲ್ಲಿಸಿದರೆ ಮಾತ್ರ ಸಹಿ ಮಾಡುತ್ತಾರೆ ಇಲ್ಲ ಆದರೆ ಯಾವುದೇ ಕಾರಣಕ್ಕೂ ಮೇಲ್ ರುಜು ಮಾಡುವುದಿಲ್ಲ..
5.
5. ವಸತಿ ನಿಲಯಗಳಲ್ಲಿ ಸಣ್ಣಪುಟ್ಟ ರಿಪೇರಿಗಳಿಗೂ ಅವಕಾಶಗಳು ನೀಡುತ್ತಿಲ್ಲ ಎಷ್ಟೇ ಮನವಿ ಬರೆದು ವಿನಂತಿಸಿದರು ಸ್ಪಂದಿಸುತ್ತಿಲ್ಲ ಏನಾದರೂ ತೊಂದರೆಗಳಾದರೆ ಇನ್ನುಳಿದವರ ಮೇಲೆ ಹಾಕಿ ನನಗೇನು ಈ ವಿಷಯಗಳ ಬಗ್ಗೆ ಗೊತ್ತಿಲ್ಲ ಅಂತ ಹೇಳಿ ಭಯಪಡಿಸುತ್ತಿದ್ದಾರೆ
6. ಈ ಅವಸ್ಥೆಯ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ ಅಂತ ಸಿಬ್ಬಂದಿಗಳನ್ನು ನೇರ ಟಾರ್ಗೆಟ್ ಮಾಡಿ ಹಿಂಸೆ ಕೊಡಲು ಪ್ರಾರಂಭಿಸುತ್ತಾರೆ ಅಮಾನತು ಶಿಫಾರಸ್ ಮಾಡುತ್ತಾರೆ ಇದರಿಂದ ಬೇಸತ್ತು ಅಧಿಕಾರಿಗಳು ಜಿಲ್ಲಾ ಕಚೇರಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ
ಇವರ ಮೇಲೆ ಆದಷ್ಟು ಬೇಗ ಸೂಕ್ತ ಕ್ರಮ ಜರುಗಿಸಬೇಕೆಂದು ನಮ್ಮ BV5 ನ್ಯೂಸ್ ಮುಖಾಂತರ ಕೇಳಿಕೊಳ್ಳುತ್ತೇವೆ
ವರದಿ: ವಿನೋದ್. ಎಂ. ಜೆ