ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ರಾತ್ರಿ ಇಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಮತ್ತೊಂದು ಲೀಗ್ ಪಂದ್ಯದಲ್ಲಿ ಸನ್ ರೈಸ್ ಹೈದರಾಬಾದ್ ತಂಡವನ್ನು 80 ರನ್ ಗಳಿಂದ ಮಣಿಸಿತು.
ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರುಗಳಲ್ಲಿ 6 ವಿಕೆಟ್ ಗೆ 200 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆಡಿದ ಸನ್ ರೈಸ್ ಹೈದರಾಬಾದ್ ತಂಡವು 16.4 ಓವರುಗಳಲ್ಲಿ 120 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 80 ರನ್ ಗಳಿಂದ ಪರಾಭವಗೊಂಡಿತು.
ಸ್ಕೋರ್ ವಿವರ:
ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರುಗಳಲ್ಲಿ 6 ವಿಕೆಟ್ ಗೆ 200
ವೆಂಕಟೇಶ ಅಯ್ಯರ 60 ( 29 ಎಸೆತ, 7 ಬೌಂಡರಿ, 3 ಸಿಕ್ಸರ್), ಅಂಗ್ರಿಶ್ ರಘುವಂಶಿ 50 ( 32 ಎಸೆತ, 5 ಬೌಂಡರಿ, 2 ಸಿಕ್ಸರ್)
ಅಜಿಂಕೆ ರೆಹಾನೆ 38( 27 ಎಸೆತ, 1 ಬೌಂಡರಿ, 4 ಸಿಕ್ಸರ್), ರಿಂಕು ಸಿಂಗ್ 32( 17 ಎಸೆತ, 4 ಬೌಂಡರಿ, 1 ಸಿಕ್ಸರ್) ಮೊಹ್ಮದ ಶೆಮಿ 29 ಕ್ಕೆ 1)
ಸನ್ ರೈಸ್ ಹೈದರಾಬಾದ್ 16.4 ಓವರುಗಳಲ್ಲಿ 120
ಹೆನ್ರಿಕ್ ಕ್ಲಾಸೆನ್ 33 ( 21 ಎಸೆತ, 2 ಬೌಂಡರಿ, 2 ಸಿಕ್ಸರ್), ಕಮಿಂಡು ಮೆಂಡಿಸ್ 27 ( 20 ಎಸೆತ, 1 ಬೌಂಡರಿ, 2 ಸಿಕ್ಸರ್)
ವೈಭವ ಅರೋರಾ 29 ಕ್ಕೆ 3), ವರುಣ ಚಕ್ರವರ್ತಿ 22 ಕ್ಕೆ 3) ಪಂದ್ಯ ಶ್ರೇಷ್ಠ: ವೈಭವ ಅರೋರಾ