ಮಾನ್ವಿ: ಪಟ್ಟಣದ ರಾಯಚೂರು ರಸ್ತೆಯಲ್ಲಿನ ಲೊಯಾಲ ಶಿಕ್ಷಣ ಸಂಸ್ಥೆಯ ಹತ್ತಿರದ ಬಯಲು ಜಾಗದಲ್ಲಿ ಕೆ.ಎಸ್.ಎನ್ ಸಮಾಜಿಕ ಸೇವಾ ಸಮಿತಿ ವತಿಯಿಂದ ನಡೆದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ದೀಪಬೇಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ನಮ್ಮ ಪಕ್ಷದ ಕೆ.ಶಿವನಗೌಡ ನಾಯಕರು, ಬಿ.ವಿ.ನಾಯಕ, ಬಸವರಾಜ ಧಡೇಸೂಗೂರು ಅಧಿಕಾರ ಇಲ್ಲದೆ ಇದ್ದರು ಕೂಡ ಯಾವುದೇ ಫಲಪೇಕ್ಷೆ ಇಲ್ಲದೆ ಜನರಿಗೆ ಒಳಿತಾಗುವ ಸಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ ರವರು ಸದಸ್ಯದಲ್ಲಿ ಯಾವುದೇ ಚುನಾವಣೆ ಇಲ್ಲ ಅವರಿಗೆ ಯಾವುದೇ ರಾಜಕೀಯ ಲಾಭ ಇಲ್ಲದೆ ಇದ್ದರು ಕೂಡ ಈ ಭಾಗದಲ್ಲಿ ಜನರು ಬಡತನದಲ್ಲಿ ಇದ್ದರೆ ತೀವ್ರಸಂಕಷ್ಟ ಅನುಭವಿಸುತ್ತಿದ್ದಾರೆ ಹಾಗೂ ತಮ್ಮ ಹಿರಿಯರ ಹಾಗೂ ಹುಟ್ಟಿ ಬೆಳೆದ ತಾಲೂಕಿನ ಜನರಿಗಾಗಿ ಯಾವುದೆ ಫಲಪೇಕ್ಷೆ ಇಲ್ಲದೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಸಾಮೂಹಿಕ ವಿವಾಹಗಳಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಒಂದಾಗಿರುವ ದಂಪತಿಗಳು ಅನುನ್ಯವಾದ ದಂಪತ್ಯ ಜೀವನವನ್ನು ನಡೆಸಿ. ನಮ್ಮ ತಂದೆಯವರಾದ ಬಿ.ಎಸ್.ಯಡಿಯುರಪ್ಪ ರಾಜ್ಯದಲ್ಲಿ ನಾಲ್ಕುಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಮೊಟ್ಟಮೋದಲಬಾರಿಗೆ ರೈತರಿಗಾಗಿ ಪ್ರತ್ಯಕವಾದ ರೈತ ಬಡ್ಜೆಟ್ ನೀಡಿದರು. ರಾಜ್ಯದಲ್ಲಿನ ಬಡವರ ,ದಿನ ದಲಿತರ,ಶೋಷಿತರ ಅಭಿವೃದ್ದಿಗಾಗಿ ಶ್ರಮಿಸಿದ ಅವರು ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪಕ್ಕದ ಮಸ್ಕಿ ತಾಲೂಕಿನ ಚುನಾವಣೆ ಸಮಯದಲ್ಲಿ ಜಿಲ್ಲೆಯಲ್ಲಿನ ಬಡತನ,ಯುವ ಸಮುದಾಯ ಉದ್ಯೋಗ ಇಲ್ಲದೆ ವಲಸೆ ಹೋಗುತ್ತಿರುವುದು. ಈ ಭಾಗದ ಜನರಿಗೆ ಇನ್ನೂ ಕೂಡ ಶುದ್ದವಾದ ಕುಡಿಯುವ ನೀರು ಕೂಡ ದೊರೆಯದೆ ಇರುವ ಪರಿಸ್ಥಿತಿಯನ್ನು ನೋಡಿದ್ದೇನೆ ನಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ರವರು ಹೇಳುತ್ತಿದ್ದ ಮಾತ್ತೆೆಂದರೆ ಉತ್ತರ ಕರ್ನಾಟಕ ಜನರು ಬಡವರಿರಬಹುದು ಅದರೆ ಅವರ ಹೃದಯದಲ್ಲಿ ಶ್ರೀಮಂತರು ನಾನು ಬಿ.ಜೆ.ಪಿ. ಪಕ್ಷದ ರಾಜ್ಯಧ್ಯಕ್ಷರಾಗಿ ಅಧಿಕಾರ ವಾಹಿಸಿಕೊಂಡ ನಂತರ ರಾಜ್ಯದಲ್ಲಿ ಬಿಜೆಪಿ ಪಕ್ಷದ ಸಂಘಟನೆಗೆ ಹೆಚ್ಚಿನ ಅಧ್ಯತೆಯನ್ನು ನೀಡಿದ್ದೇನೆ ಮುಂದಿನ ದಿನಗಳಲ್ಲಿ ಈ ಭಾಗದ ಸಂಪೂರ್ಣವಾದ ಅಭಿವೃದಿಗೆ ಈ ಭಾಗದ ನಾಯಕರೊಂದಿಗೆ ಶ್ರಮಿಸುತ್ತೇನೆ.ಈಭಾಗಕ್ಕೆ ಶಕ್ತಿ ತುಂಬುತ್ತೇನೆ. ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದು ಈ ಕುರಿತು ಕೇಂದ್ರದ ಮುಖಂಡರೊAದಿಗೆ ರಾಷ್ಟಿçÃಯ ಅಧ್ಯಕ್ಷರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಬರವಸೆ ನೀಡಿದರು.
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ ಕೆ.ಎಸ್.ಎನ್ ಸಮಾಜಿಕ ಸೇವಾ ಸಮಿತಿ ವತಿಯಿಂದ ಸಾವಿರಾರು ಯುವಕರು ಸೇರಿ ಕಳೆದ 10 ವರ್ಷಗಳಿಂದ ಸಮಾಜಸೇವ ಕಾರ್ಯಗಳನ್ನು ನಡೆಸುತ್ತಿದ್ದಾರೆ. ತಾಲೂಕಿಗೆ ಮೋಟ್ಟಮೋದಲಬಾರಿ ಆಗಮಿಸಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರನ್ನು ಸಾನ್ಮನಿಸಬೇಕು ಗೌರವಿಸಬೇಕು ಹಾಗೂ ಈ ಭಾಗದ ಸಮಸ್ಯೆಗಳ ಬಗ್ಗೆ ಅವರ ಗಮನಕ್ಕೆ ತರಬೇಕು ಹಾಗೂ ಈ ಬಾಗದ ಬಡಜನರಿಗಾಗಿ ಸಾಮೂಹಿಕ ವಿವಾಹಗಳನ್ನು ನಡೆಸಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ಅಯೋಜಿಸಲಾಗಿದ್ದೆ . ಈ ಭಾಗದ ಅಭಿವೃದಿಗೆ ಸರಕಾರದಿಂದ ಅಗತ್ಯವಾದ ಅನುದಾನ ದೊರೆಯುತ್ತಿಲ್ಲ ಈ ಭಾಗಕ್ಕೆ ಮಂಜೂರಾದ ಅನೇಕ ಯೋಜನೆಗಳು ಬೇರೆ ಜಿಲ್ಲೆಗಳಿಗೆ ಹೊಗುತ್ತಿವೇ.ತ್ರಿಬಲ್ ಐ.ಐ.ಟಿ. ಕೈತಪ್ಪಿದೆ. ಕಳೆದ ಮೂರು ವರ್ಷಗಳಿಂದ ಈ ಭಾಗದ ಬಡವರಿಗೆ ಅಗತ್ಯ ಚಿಕಿತ್ಸೆ ಪಡೆಯುವುದಕ್ಕೆ ಅಗತ್ಯವಿರುವ ಏಮ್ಸ್ ಮಂಜೂರು ಮಾಡುವಂತೆ ಹೋರಾಟ ನಡೆಸಲಾಗುತ್ತಿದ್ದು ರಾಜ್ಯ ಸರಕಾರಕೂಡ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಶಿಪಾರಸ್ಸು ಮಾಡಿದರು ಕೂಡ ಕೇಂದ್ರ ಸ್ಪಂದಿಸುತ್ತಿಲ್ಲ, ನೀರಾವರಿ ಯೋಜನೆಗಳಿಗಾಗಿ ನವಲಿಯಲ್ಲಿ ಸಮನಾಂತರ ಜಲಾಶಯ ನಿರ್ಮಾಣವಾಗಬೇಕು. ಅದ್ದರಿಂದ ಈ ಭಾಗದ ಅಭಿವೃದ್ದಿಗಾಗಿ ರಾಯಚೂರು ಜಿಲ್ಲೆಯ ಒಂದು ಕ್ಷೇತ್ರದಲ್ಲಿ ತಾವು ಸ್ಪರ್ಧೇಮಾಡಿ ನಾವು ಗೇಲಿಸಿಕೊಂಡು ಬರುತ್ತೇವೆ ಆಗ ಮಾತ್ರ ಈ ಭಾಗದ ಅಭಿವೃದ್ದಿ ಸಾಧ್ಯವಾಗುತ್ತದೆ. ಕೇಂದ್ರ ನಾಯಕರ ಮನವೋಲಿಸಿ ಎಮ್ಸ ಮಂಜೂರು ಮಾಡಿದಲ್ಲಿ ಈ ಭಾಗದ ಜನರು ನಿಮ್ಮನ್ನು ದೇವರಂತೆ ಕಾಣುತ್ತಾರೆ ನಿಮ್ಮ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಬಿ.ಎಸ್.ಯಡಿಯೂರಪ್ಪರಂತ ವಿಚಾರಧಾರೆ ,ಚಿಂತನೆಗಳುಳ್ಳ ಹೊಸ ಸರಕಾರ ನೀಡಬೇಕಾದಲ್ಲಿ 2028ರಲ್ಲಿ ನೀವು ಮುಖ್ಯಮಂತ್ರಿಯಾಗಬೇಕು ಎಂದು ತಿಳಿಸಿದರು.
ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನರ್ಧಾನರೆಡ್ಡಿ ಮಾತನಾಡಿ ಬಳ್ಳಾರಿಯಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ಸುಷ್ಮಸ್ವರಾಜ್ ನೇತೃತ್ವದಲ್ಲಿ 25 ವರ್ಷಗಳಿಂದ 50ಸಾವಿರ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರಲಾತ್ತಿರುವ ನೆನಪ್ಪನ್ನು ಇಂದು ಕೆ.ಶಿವನಗೌಡ ನಾಯಕ ಮೂಡಿಸಿದ್ದಾರೆ. ದೇವದುರ್ಗದ ಮಾಜಿ ಶಾಸಕರಾಗಿದ್ದರು ಕೂಡ ತಮ್ಮ ಪೂರ್ವಜರ ಹುಟ್ಟುರಿನ ನೆನಪಿಗಾಗಿ ತಾಲೂಕಿನ ಜನರ ಋಣವನ್ನು ತೀರಿಸುವ ಉದ್ದೇಶದಿಂದ ಹಾಗೂ ಬಡ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಉಚಿತ ಸಾಮೂಹಿಕ ಮದುವೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 2028 ಕ್ಕೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲ್ಲಿದ್ದು ಈ ಭಾಗದಲ್ಲಿ ಮತ್ತೆ ಶಾಸಕರಾಗಿ ಕೆ.ಶಿವನಗೌಡನಾಯಕ, ಬಿ.ವಿ. ನಾಯಕ, ಬಸವರಾಜ ಧಡೆಸೂಗೂರು ಜನರಿಂದ ಆಯ್ಕೆಯಾಗಿ ಅಭಿವೃದ್ದಿ ಕಾರ್ಯಕೈಗೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಉಚಿತ ಸಾಮೂಹಿಕ ವಿವಾಹದಲ್ಲಿ 82ಕ್ಕೂ ಹೆಚ್ಚು ಸರ್ವಧರ್ಮ ಜೋಡಿಗಳು ವಿವಾಹವಾಗಿ ದಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಅಗತ್ಯ ಊಟದ ಸೌಲಭ್ಯ ಕಲ್ಪಿಸಲಾಯಿತು.
ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರರವರನ್ನು ಮುಖ್ಯ ಬೀದಿಯಿಂದ ಸಮಾರಂಭ ನಡೆಯುವ ವೇದಿಕೆಯವರೆಗೂ ಅದ್ದೂರಿಯಾಗಿ ಸ್ವಾಗತಕೋರಲಾಯಿತು.ಅಭಿಮಾನಿಗಳು ಜೆಸಿಬಿಗಳಿಂದ ನಾಯಕರಿಗೆ ಪುಷ್ಪ ವೃಷ್ಟಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಮಾನ್ವಿ ಕಲ್ಮಠದ ಶ್ರೀ ವೀರೂಪಾಕ್ಷ ಪಂಡಿತಾರಾಜ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಚೀಕಲಪರ್ವಿ .ಶ್ರೀ ಸದಾಶಿವಮಹಾಸ್ವಾಮಿಗಳು, ಬಿಚ್ಚಲಿ ಮಠದ ಶ್ರೀ ವೀರಭದ್ರಶಿವಾಚಾರ್ಯ ಮಹಾಸ್ವಾಮಿಗಳು, ಗಬ್ಬೂರು ಬೂದಿ ಬಸವೇಶ್ವರ ಮಹಾಸ್ವಾಮಿಗಳು, ವೀರಗೋಟ ಶ್ರೀ ಅಡವಿಲಿಂಗ ಮಹಾರಾಜರು , ಶ್ರೀ ಹಜರತ್ ಸೈಯಾದ್ ನುಸರತ್ ಮೀಯಾ ಚಿಸ್ತಿ ವಾಡಿ ಸಾಹೇಬ್, ಮುಂಡರಗಿ ಶ್ರೀ ಶಿವಣ್ಣ ತಾತಾ, ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು,ಕರೇಗುಡ್ಡ ಶ್ರೀ ಮಹಾಂತಲಿAಗ ಶಿವಾಚಾರ್ಯ ಮಹಾಸ್ವಾಮಿಗಳು, ಶಂಕರಯ್ಯಸ್ವಾಮಿ ಸುವರ್ಣಗೀರಿ ಮಠ, ಸಿರವಾರ ಬ್ರಹ್ಮಕುಮಾರಿ ಜ್ಯೋತಿ ಅಕ್ಕನವರು, ಸೇರಿದಂತೆ ನೂರಾರು ಪೂಜ್ಯರು ಹಾಗೂ ಕೆ.ಎಸ್.ಎನ್ ಸಮಾಜಿಕ ಸೇವಾ ಸಮಿತಿಯ ಸಂಚಾಲಕರಾದ ತಿಮ್ಮರೆಡ್ಡಿ ಭೋಗವತಿ, ಶಾಸಕ ಬೈರತಿ ಬಸವರಾಜ, ಶಾಸಕ ಡಾ.ಎಸ್.ಶಿವರಾಜ್ ಪಾಟೀಲ್, ಮಾಜಿ ಸಂಸದರಾದ ಬಿ.ವಿ.ನಾಯಕ , ಗಂಗಾಧರ ನಾಯಕ, ಎನ್.ಶಂಕ್ರಪ್ಪ, ಎಂ.ವಿರೂಪಾಕ್ಷಿ , ಸೈಯಾದ್ ಅಕ್ಬರ್ ಸಾಬ್, ವೀರಭದ್ರಪ್ಪ ಅಲ್ದಾಳ್ ,ರಾಜ್ಯ ಕುರುಬರ ಸಂಘದ ಅಧ್ಯಕ್ಷರಾದ ಎಂ.ಈರಣ್ಣ, ಹನುಮಂತಪ್ಪ ಆಲ್ಕೋಡ್, ತಿಪ್ಪರಾಜು ಹವಾಲ್ದಾರ್, ದೊಡ್ಡನಗೌಡ ಹೆಚ್. ಪಾಟೀಲ್ ,ಮಲ್ಲನಗೌಡ ನಕ್ಕುಂದಿ, ,ಶರಣು ತಳ್ಳಿಕೇರಿ, ಸೇರಿದಂತೆ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು ಹಾಗೂ ಸರ್ವಧರ್ಮಗಳ ಧರ್ಮಗುರುಗಳು ಭಾಗವಹಿಸಿದರು.
ಕೆ.ಎಸ್.ಎನ್ ಸಮಾಜಿಕ ಸೇವಾ ಸಮಿತಿಯ ಮುಖಂಡರಾದ ವಿಶ್ವನಾಥ ಪಾಟೀಲ್,ಮಲ್ಲಿಕಾರ್ಜುನ ಜಕ್ಕಲದಿನ್ನಿ,ಕೆ.ನಾಗಲಿಂಗ ಸ್ವಾಮಿ,ಉಮಾಕಾಂತ ಸಾಹುಕರ್,ವೀರೇಶನಾಯಕ ಬೆಟ್ಟದೂರು, ರಾಹುಲ್ ಕಾಲಂಗೇರ ಸದ್ದಾಂ ಹುಸೇನ್ ಸೇರಿದಂತೆ ನೂರಾರು ಕಾರ್ಯಕರ್ತರು ಅಗತ್ಯ ವ್ಯವಸ್ಥೆ ಕೈಗೊಂಡಿದ್ದರು.