ಮುದಗಲ್: 69 ರಾಜ್ಯೋತ್ಸವದ ನಿಮಿತ್ತ 850 ಅಡಿ ಧ್ವಜಾ ಮೆರವಣಿಗೆ’ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ನಯೀಮ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ 16 ವರ್ಷಗಳಿಂದ ನಾಡಿನ ನೆಲ, ಜಲ, ಭಾಷೆ ಸೇರಿದಂತೆ ವಿವಿಧ ರಕ್ಷಣೆಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ವರ್ಷ ರಾಜ್ಯೋತ್ಸವ ಅಂಗವಾಗಿ ನ. 28 ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡದ ಅಭಿಮಾನ ಬೆಳೆಸುವ ಉದ್ದೇಶದಿಂದ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ಹಾಗೂ ಎಂಟು ನೂರ ಐವತ್ತು ಅಡಿ (850) ಕನ್ನಡ ಬಾವುಟದ ಮೆರವಣಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಲಿಂಗಸೂಗೂರು ರಸ್ತೆಯ ಸೀಕ್ರೆಟ್ ಹಾರ್ಟ್ಸ್ ಅಂಗ್ಲ ಮಾಧ್ಯಮ ಶಾಲೆಯ ಮೈದಾನದಿಂದ ಪುರಸಭೆಯ ರಂಗಮಂದಿರದ ವರಿಗೆ ಕನ್ನಡ ಧ್ವಜ ಮೆರವಣಿಗೆ ನಡೆಯಲಿದೆ. ಪುರಸಭೆ ಅಧ್ಯಕ್ಷೆ ಮಹಾದೇವಮ್ಮ ನರಸಯ್ಯ ಗುತ್ತೇದಾರ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಧ್ವಜಾರೋಹಣವನ್ನು ಕೆ.ಪಿ.ಸಿ.ಸಿ. ರಾಜ್ಯ ಉಪಾಧ್ಯಕ್ಷ ಡಿ.ಎಸ್.ಹೂಲಗೇರಿಅವರು ನೆರವೇರಿಸಲಿದ್ದಾರೆ. ಮುದಗಲ್ ಪಟ್ಟಣದ ಕನ್ನಡದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಾಜ್ಯೋತ್ಸವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.
ಕರವೇ ಪದಾಧಿಕಾರಿಗಳಾದ ಸಂತೋಷ ,ಎಸ್ ಎನ್ ಖಾದ್ರಿ, ಸಾಬು ಹುಸೇನ್, ಇಸ್ಮಾಯಿಲ್ ಬಳಿಗಾರ , ಮಹಾಂತೇಶ ಚಟ್ಟರ್ , ಇಮಾಮ ಹುಸೇನ್ ತಮಾಟಾ, ಶಶಿಧರ ಸ್ವಾಮಿ, ಬಾಲಪ್ಪ, ಜಮಾಲಿಸಾಬ,ರಾಯಪ್ಪ, ಹನೀಪ್ ಖಾನ್ , ಭಿಮಣ್ಣ, ಅಬ್ದುಲ್ ಮಜೀದ್, ಇಸ್ಮಾಯಿಲ್ ಕೊಳ್ಳಿ, ಜಮೀರ್ ಮೇಸ್ತ್ರಿ, ಅವೇಜ್ ಮುನ್ನ,ಇತರರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ