
ಬೆಳಗಾವಿ: ಹೌದು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಮಿನಿಸ್ಟರ್ ss ಮಲ್ಲಿಕಾರ್ಜುನ ರವರು ಬರೀ ದಾವಣಗೆರೆ ಜಿಲ್ಲೆಗೆ ಮಾತ್ರ ಸೀಮಿತ ವಾದರೇನೋ ಅನಿಸುತ್ತಾ ಇದೆ. ಇದಕ್ಕೆ ದಿನನಿತ್ಯ ಕಿತ್ತೂರು ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ ಹೀಗೆ ಬಹುತೇಕ ಜಿಲ್ಲೆಗಳ ತೋಟಗಾರಿಕೆ ಇಲಾಖೆ ವ್ಯಾಪ್ತಿಯ ಬೆಳೆಗಳಾದ ಹಸಿ ಮೆಣಸಿನಕಾಯಿ, ಸೌತೆಕಾಯಿ, ಹಾಗಲಕಾಯಿ, ಹೀರೆಕಾಯಿ, ಬದನೆಕಾಯಿ, ಟೊಮ್ಯಾಟೋ ಹೀಗೆ ವಿವಿಧ ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆಯಿಲ್ಲದೇ ಇರುವ ಕಾರಣ ಹಾಗೂ ಬ್ರೋಕರ್ ಗಳ ಹಾವಳಿಯಿಂದ ಕಂಗೆಟ್ಟು ಕಂಗಾಲಾದ ರೈತರು ದಿನನಿತ್ಯ ಕಣ್ಣೀರು ಇಡು ತ್ತಿದ್ದರೂ ಸಹ ಕ್ಯಾರೇ ಎನ್ನದೇ ಬರೀ ದಾವಣಗೆರೆಯಲ್ಲೇ ಸುತ್ತಾಡಿಕೊಂಡಿರುವ ಮಿನಿಸ್ಟರ್ ಮಲ್ಲಿಕಾರ್ಜುನ ಅವರೇ ನೋಡ್ರಿ ಈ ಕಥೆಯನ್ನುಅಷ್ಟಕ್ಕೂ ಬೆಳಗಾವಿ ಜಿಲ್ಲೆಯ ಖಾನಾಪುರ, ಕಿತ್ತೂರು ತಾಲ್ಲೂಕು ಮಲಪ್ರಭಾ ನದಿ ದಂಡೆಯಲ್ಲಿ ಬೇಸಿಗೆಯಲ್ಲಿ ಬೆಳೆಯುವ ಪ್ರಮುಖ ತರಕಾರಿ ಬೆಳೆಗಳಲ್ಲಿ ಸೌತೆಕಾಯಿ ಬೆಳೆಯು ಸಹ ಒಂದು. ಆದ್ರೆ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ ಬಿತ್ತನೆ ಮಾಡುವಾಗ ಸೌತೆಕಾಯಿಗೆ ಒಳ್ಳೇ ರೇಟ್ ಇತ್ತು. ಆದ್ರೇ ಪಸಲಿಗೆ ಬಂದು ಇನ್ನೇನೂ ಕುಯ್ದು ಮಾರಾಟ ಮಾಡಬೇಕು ಎನ್ನುವಷ್ಟರಲ್ಲೆ ಸೌತೆಕಾಯಿ ಬೆಲೆಯೂ ನೆಲಕ್ಕಚ್ಚಿದ್ದರಿಂದ ಕಂಗಾಲಾದ ರೈತ ಸೌತೆಕಾಯಿಯನ್ನು ಟನ್ ಗಟ್ಟಲೆ ಕಿತ್ತು ತಿಪ್ಪೆಗೆ ಎಸೆದು ಕಣ್ಣೀರು ಇಡುತ್ತಿದ್ದಾನೆ. ಆದ್ದರಿಂದ ಮನವಿ ಮೇರೆಗೆ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಮಲಪ್ರಭಾ ನದಿ ದಂಡೆಯ ಸೌತೆಕಾಯಿ ಬೆಳೆದ ವೀರಾಪುರ ಗ್ರಾಮದ ವೀರಣಗೌಡ ಪಾಟೀಲ್ ಅವರ ಹೊಲಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ.
ವಿಶೇಷ ವರದಿ : ಬಸವರಾಜು




