ಹುಮನಾಬಾದ : ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ ಬಿ ಗ್ರಾಮದ ಹೊರವಲಯದಲ್ಲಿರುವ ಹಜರತ್ ಮೊಹಮ್ಮದ್ ಪಾಶ ಖಾದ್ರಿ ಚಿಸ್ತಿಯ ಆಲ್ ಇಫ್ತಾಖರಿ ದರ್ಗಾದ 8ನೇ ಜಾತ್ರಾ ಉರುಸ್ ಮಾರ್ಚ್ ನಾಲ್ಕರಂದು ಅತೀ ವಿಜೃಂಭಣೆಯಿಂದ ಜರುಗಿತ್ತು.
ಅಂದು ಅಪಾರ ಸಂಖ್ಯೆಯಲ್ಲಿ ದರ್ಗಾದ ಭಕ್ತಾದಿಗಳು ಬಂದು ಪ್ರಾರ್ಥನೆ ಸಲ್ಲಿಸಿ ಖವಾಲಿಯಲ್ಲಿ ಪಾಲ್ಗೊಂಡಿದ್ದರು.
ದರ್ಗಾದ ಪೀಠಾದೀಪತಿಯವರು ಪಟ್ಟಣದ ಪ್ರಮುಖರ ಜೊತೆ ಗೂಡಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಔತಣ ಕೂಟದಲ್ಲಿ ಭಾಯಾಗಿಯಾಗಿದ್ದರು.
ಬಳಿಕ ರಂಜಾನ್ ನಿಮಿತ್ತ ಆಯೋಜಿಸಿದ ಇಫ್ತಾಯಾರ್ ಕೂಟದಲ್ಲಿ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸಯ್ಯದ ಅಸದ್ ಸಾಬ್,ಪುರಸಭೆ ಸದಸ್ಯ ರಜಾಕ್,ಎಂಡಿ ಅಬ್ದುಲ್ ಗನಿಷಾ ಖಾದರಿ,ಎಂಡಿ ಜಾಲಿಷಾ ಖಾದ್ರಿ, ಸಜ್ಜದ್ ಸೇರಿ ಅನೇಕರು ಇದ್ದರು.
ವರದಿ : ಸಜೀಶ ಲಂಬುನೋರ




