Ad imageAd image

ಸವದತ್ತಿ ಪಟ್ಟಣದಲ್ಲಿ ಕುಕ್ಕರ್ ಸ್ಫೋಟ : 9 ಮಂದಿಗೆ ಗಂಭೀರ ಗಾಯ 

Bharath Vaibhav
ಸವದತ್ತಿ ಪಟ್ಟಣದಲ್ಲಿ ಕುಕ್ಕರ್ ಸ್ಫೋಟ : 9 ಮಂದಿಗೆ ಗಂಭೀರ ಗಾಯ 
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯ ಹೋಟೆಲ್ ನಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಇರುವ ಹೋಟೆಲ್ ಒಂದರಲ್ಲಿ ಕುಕ್ಕರ್ ಸ್ಫೋಟಗೊಂಡು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಯಾದಗಿರಿಯ ಐವರು ಹಾಗೂ ಬೆಂಗಳೂರಿನ ನಾಲ್ವರು ಸೇರಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳು ಸವದತ್ತಿಗೆ ದೇವರ ದರ್ಶನಕ್ಕೆಂದು ಬಂದು ಪಟ್ಟಣದ ಹೋಟೆಲ್ ರೂಂ ನಲ್ಲಿ ತಂಗಿದ್ದರು. ಈ ವೇಳೆ ಹೋಳಿಗೆ ಮಾಡಲೆಂದು ಹೋಟೆಲ್ ರೂಮಿನಲ್ಲಿ ಕುಕ್ಕರ್ ನಲ್ಲಿ ಬೇಳೆ ಬೇಯಿಸಲು ಇಟ್ಟಿದ್ದರು. ಆದರೆ ಬೇಳೆಗೆ ನೀರು ಹಾಕಲು ಮರೆತಿದ್ದಾರೆ.

ಪರಿಣಾಮ ಕೆಲವು ಕ್ಷಣದಲ್ಲೇ ಕುಕ್ಕರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಹೋಟೆಲ್ ತುಂಬ ಬೆಂಕಿ ಆವರಿಸಿದೆ. ಪರಿಣಾಮ 9 ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!