Ad imageAd image

ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ. 90 ರ ಅಂಕ

Bharath Vaibhav
ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ. 90 ರ ಅಂಕ
WhatsApp Group Join Now
Telegram Group Join Now

————————————ಸಿಬಿಎಸ್ಇ ಫಲಿತಾಂಶ ಪ್ರಕಟ (12ನೇ ತರಗತಿ)

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) ಇಂದು 12ನೇ ತರಗತಿ ಫಲಿತಾಂಶ ಬಿಡುಗಡೆ ಮಾಡಿದೆ. ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಶೇ.5ರಷ್ಟು ಮುಂಚೂಣಿ ಸಾಧಿಸುವ ಮೂಲಕ ಮೇಲುಗೈ ಪಡೆದಿದ್ದಾರೆ ಎಂದು ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದರು.

ಫಲಿತಾಂಶ ಪ್ರಕಟಿಸಿ ಮಾತನಾಡಿದ ಅವರು, ಈ ಬಾರಿ 12ನೇ ತರಗತಿಯಲ್ಲಿ ಶೇ 88.39ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಫಲಿತಾಂಶದಲ್ಲಿ ಕೊಂಚ ಮಟ್ಟದ ಸುಧಾರಣೆ ಕಂಡಿದೆ ಎಂದರು.

1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶೇ.90ರಷ್ಟು ಅಂಕ: 12ನೇ ತರಗತಿ ಪರೀಕ್ಷೆಯಲ್ಲಿ 1.15 ಲಕ್ಷ ವಿದ್ಯಾರ್ಥಿಗಳು ಶೇ 90ರಷ್ಟು ಅಂಕ ಗಳಿಸಿದ್ದು, 24,000 ವಿದ್ಯಾರ್ಥಿಗಳು ಶೇ 95ರಷ್ಟು ಅಂಕ ಗಳಿಸಿದ್ದಾರೆ. ಫೆ. 4ರಿಂದ ಏಪ್ರಿಲ್​ 15ರವರೆಗೆ 12ನೇ ತರಗತಿ ಪರೀಕ್ಷೆಗಳು ದೇಶಾದ್ಯಂತ ನಡೆದಿದ್ದು, ಸುಮಾರು 16,92,794 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ 14,96,307 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!