Ad imageAd image

ಪುರಸಭೆ ವತಿಯಿಂದ ನುಲಿಯ ಚಂದಯ್ಯ 917ನೇ ಜಯಂತಿ ಆಚರಣೆ..

Bharath Vaibhav
ಪುರಸಭೆ ವತಿಯಿಂದ ನುಲಿಯ ಚಂದಯ್ಯ 917ನೇ ಜಯಂತಿ ಆಚರಣೆ..
WhatsApp Group Join Now
Telegram Group Join Now

ಮುದಗಲ್ಲ :-ಪುರಸಭೆ ವತಿಯಿಂದ ನುಲಿಯ ಚಂದಯ್ಯನವರ 917ನೇ ಜಯಂತಿಯನ್ನು ಆಚರಿಸಲಾಯಿತು.ಮುಖ್ಯಾಧಿಕಾರಿ ನಭಿಸಾಬ ಕಂದಗಲ್ಲ ಅವರು ಮಾತನಾಡಿ 12 ನೇ ಶತಮಾನದಲ್ಲಿ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ನುಲಿಯ ಚಂದಯ್ಯನವರು ಶ್ರೇಷ್ಟ ವಚನಕಾರರಾಗಿದ್ದರು. ಅವರ ಹಲವಾರು ವಚನಗಳು ನಮಗೆ ಲಭ್ಯವಾಗಿವೆ. ಅವರ ವಚನಗಳಲ್ಲಿ ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಜಂತ್ರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹನುಮಂತ ಭಜಂತ್ರಿ,ಮಾತನಾಡಿ ‘ವಚನಕಾರ ನುಲಿಯ ಚಂದಯ್ಯ ಜಯಂತಿ ಅಂಗವಾಗಿ ಯುವಕರಿಗೆ ಕ್ರಿಕೆಟ್‌ ಪಂದ್ಯಾವಳಿ ಏರ್ಪಡಿಸಲಾಗಿದೆ. ಸರ್ಕಾರಿ ನೌಕರರು, ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್ ಶಿವಶರಣ ನೂಲಿ ಚಂದಯ್ಯ ಭಜಂತ್ರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಹನುಮಂತ ಭಜಂತ್ರಿ ಉಪಾಧ್ಯಕ್ಷ ಬಸವರಾಜ್ ಭಜಂತ್ರಿ ಸದಸ್ಯರಾದ ಗಂಗಪ್ಪ ಭಜಂತ್ರಿ ಮೌನೇಶ್ ಭಜಂತ್ರಿ ಶಿವಕುಮಾರ್ ತಲೆಕಾನ್ ಭಜಂತ್ರಿ ಹನುಮಂತ ಭಜಂತ್ರಿ ಮತ್ತು ಪುರಸಭೆ ಸಿಬ್ಬಂದಿ ವರ್ಗದವರು ಇನ್ನು ಇತರರು ಭಾಗವಹಿಸಿದ್ದರು

ವರದಿ:-ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!