ಹುಬ್ಬಳ್ಳಿ : ಷೇರ್ ಮಾರ್ಕೆಟ್ ಹೆಸ್ರಲ್ಲಿ ವಂಚನೆ ಹೆಚ್ಚಾಗ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ.ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ನಾಮ ಹಾಕಿದ್ದಾರೆ.
ಹುಬ್ಬಳ್ಳಿಯ ಗುರುರಾಜ ಕೆ. ಎಂಬುವವರಿಗೆ ಸಾಯಿ ಮರಾಠಾ, ಜಿತೇಂದ್ರ ಬಹದ್ದೂರ ಎಂಬುವರು ವಂಚಿಸಿದ್ದಾರೆ.
ಮೊದಲಿಗೆ ಇಂಡಿಯಾ ಇನ್‌ಟ್ರೇಡಿ ಟ್ರೇಡಿಂಗ್ 8 ಎನ್ನುವ ವಾಟ್ಸ್‌ಆಯಪ್ ಗ್ರೂಪ್‌ಗೆ ಗುರುರಾಜ ಅವರನ್ನು ಸೇರಿಸಿದ್ದಾರೆ. ನಂತರ CHPC ಸೆಸ್ ಎಂಬ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಸಿಕೊಟ್ಟು ಷೇರು ಮಾರುಕಟ್ಟೆ ವ್ಯವಹಾರ ಮಾಡುವಂತೆ ತಿಳಿಸಿದ್ದಾರೆ.
ನಂತರ ವಿವಿಧ ಅಕೌಂಟ್‌ಗಳ ಮೂಲಕ 50 ಸಾವಿರ ರೂ. ಗುರುರಾಜಗೆ ಹಾಕಿದ್ದಾರೆ. ನಂತರ ವಾಲ್ ಟೀಮ್ 1 ಎಂಬ ವಾಟ್ಸ್‌ಆಯಪ್ ಗ್ರೂಪ್‌ಗೆ ಸೇರಿಸಿ ಹಂತ ಹಂತವಾಗಿ 93,68,500 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಗುರುರಾಜಗೆ ಮೋಸ ಮಾಡಿದ್ದಾರೆ.
ಈ ಕುರಿತು CEN ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಂಚಕರಿಗಾಗಿ ಬಲೆ ಬೀಸಿದ್ದಾರೆ. ಸಿಸ್ಟಮ್ ಐಪಿ ಅಡ್ರೆಸ್ ಹಾಗೂ ಫೋನ್ ನಂಬರ್ ಆಧರಿಸಿ ವಂಚಕರಿಗೆ ಬಲೆ ಬೀಸಿದ್ದಾ ರೆ.ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ನಾಮ ಹಾಕಿದ್ದಾರೆ.




