ರೋಣ : 2024-2 5ನೆಯ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶಾಲೆಯ 32 ವಿದ್ಯಾರ್ಥಿಗಳ ಪೈಕಿ 31 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ರೋಣ ತಾಲೂಕಿನ ಹೊಳೆ ಮಣ್ಣೂರು ಸರ್ಕಾರಿ ಪ್ರೌಢಶಾಲೆ 97% ಫಲಿತಾಂಶ ಪಡೆದು, ಗುಣಾತ್ಮಕ ಶಿಕ್ಷಣದಲ್ಲಿ82.32% ಸಾಧನೆಗೈದು A ಸ್ಥಾನದಲ್ಲಿ ಖಾತ್ರಿ ಆಗಿ ಮುಂದುವರೆದಿದೆ.

625ಕ್ಕೆ 584 ಅಂಕ ಪಡೆದು ಸಂಗೀತ ಮುಳ್ಳೂರು ಶಾಲೆಗೆ ಪ್ರಥಮ ಸ್ಥಾನ,579 ಅಂಕ ಪಡೆದ ಕುಮಾರಿ ಶೃತಿ ಕಳಸದ ದ್ವಿತೀಯ ಸ್ಥಾನ ಹಾಗೂ575 ಅಂಕ ಪಡೆದ ಕುಮಾರಿ ಲಕ್ಷ್ಮಿ ಹೊಸಮನಿ ತೃತೀಯ ಸ್ಥಾನ ಪಡೆದಿದ್ದಾರೆ.
ಶಾಲೆಯ ಎಂಟು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಉನ್ನತ ಸ್ಥಾನದಲ್ಲಿ 16 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸರ್ಕಾರಿ ಪ್ರೌಢಶಾಲೆಯ ಒಟ್ಟಾರೆ ಫಲಿತಾಂಶಕ್ಕೆ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ಹಾಗೂ ಉನ್ನತ ದರ್ಜೆ ಯಲ್ಲಿ ತೇರ್ಗಡೆ ಹೊಂದಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಆಡಳಿತ ಮಂಡಳಿ ಶಾಲಾ ಮುಖ್ಯೋಪಾಧ್ಯಾಯರು,ಸಿಬ್ಬಂದಿ ಎಸ್ಡಿಎಂಸಿ ಪದಾಧಿಕಾರಿಗಳು ಗ್ರಾಮದ ಗುರಿ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ.




