Ad imageAd image
- Advertisement -  - Advertisement -  - Advertisement - 

971 ನೇ ಜಯಂತೋತ್ಸವ ಕಾರ್ಯಕ್ರಮ

Bharath Vaibhav
971  ನೇ  ಜಯಂತೋತ್ಸವ ಕಾರ್ಯಕ್ರಮ
WhatsApp Group Join Now
Telegram Group Join Now

ಅಮೀನಗಡ :12ನೇ ಶತಮಾನದಲ್ಲಿ ಅಸಂಖ್ಯಾತ ಶರಣರ ಮಧ್ಯ ಅನೇಕ ರಾಜ ಮಹಾಜರು ಈ ದೇಶವನ್ನು ಆಳಿದ್ದಾರೆ, ಆದರೆ ಎಂದಾರೂ ನಾವು ಮಹಾ ರಾಜರ ಜಯಂತಿಯನ್ನು ಆಚರಣೆ ಮಾಡತಾ ಇದಿವಾ ಇಲ್ಲ ! ಆದರೆ ರಾಜ ಮನೆತನದವರು ಮಾತ್ರ ಆಚರಣೆ ಮಾಡಬಹುದು ಮುತ್ತು ರತ್ನಗಳನ್ನು ಸೇರಿನಿಂದ ಅಳೆದು ತುಗದ ಈ ನಾಡಲ್ಲಿ ಯಾವ ರಾಜರ ಜಯಂತಿ ಇಲ್ಲ ಆದರೆ ೯೧೭ ವರ್ಷಗಳ ಹಿಂದೆ ಕೆವಲ ತಮ್ಮ ಕಾಯದಿಂದ ಬಂದ ಕಣದಿಂದ ಪ್ರಸಾದ ಮಾಡಿ ಉಳಿದ ಹಣ ಅಥವಾ ದವಸವನ್ನು ಕಲ್ಯಾಣಕ್ಕೆ ಪ್ರಸಾದ ಮಾಡಲು ನೀಡುತ್ತಿದ್ದರು.

ಕಾಯಕವೇ ಸರ್ವ ಶ್ರೇಷ್ಠ ಎಂದು ಜಗತ್ತಿಗೆ ಸಾರಿದ ಶರಣರಲ್ಲಿ ನೂಲಿಚಂದಯ್ಯನವರು ಕೂಡ ಒಬ್ಬರು ,ಅಂತಹ ಸರಳ ವ್ಯಕ್ತಿತ್ವದ ,ಶರಣರ ಸಾಲಲ್ಲಿ ನೂಲಿ ಚಂದಯ್ಯನವರ ಅದ್ಬುತ ಚಿಂತನೆ ಹಾಗೂ ಅವರ ಶುದ್ದ ಕಾಯಕ ಎಷ್ಟೇಂದರೆ ಕಿರಳಲ್ಲಿರುವ ಲಿಂಗ ಜಾರಿ ಬಿದ್ದರು ಸಹ ಅದನ್ನು ಕೈಗೆತ್ತಿಕೊಂಡು ಮತ್ತೆ ಧರಿಸಲಿಲ್ಲ

ಅಷ್ಟೊಂದು ಕಾಯಕದಲ್ಲಿ ಅವರು ಶ್ರೆದ್ದೆ,ಮತ್ತು ಭಕ್ತಿಯನ್ನು ಹೊಂದಿದ್ದರು. ಎಂದು ಸೂಳೇಭಾವಿ ಗ್ರಾಮದಲ್ಲಿ ೯೧೭ ನೆಯ ಶಿವಶರಣ ಶ್ರೀ ನೂಲಿ ಚಂದಯ್ಯನವರ ಜಯಂತಿಯನ್ನು ಉದ್ದೇಶಿಸಿ ಮಾಜಿ ಶಾಸಕ ಎಸ್,ಜಿ,ನಂಜಯ್ಯನಮಠ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಧುರಿಣರಾದ ಆರ್ ಪಿ ಕಲಬುರಗಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಯುವಕರು ಇಂದು ಸತ್ಯಶುದ್ದ ಕಾಯಕ ಮಾಡುವ ಮೂಲಕ ಒಳ್ಳೆಯ ಸಾಧನೆ ಮಾಡಬೇಕು ಸೋಮಾರಿಗಳಾಗಿ ಕಾಲಹರಣ ಮಾಡಬಾರದು ನಿಮಗೆ ಆರ್ಥಿಕ ಸಹಾಯ ಬೇಕಾದರೆ, ನಮ್ಮ ಬ್ಯಾಂಕ್ ನಿಮಗೆ ಸಾಲ ನೀಡುತ್ತದೆ

ಒಳ್ಳೆಯ ಯೋಜನೆ ಹಾಕಿಕೊಂಡು ದುಡಿಯುವ ಯುವಕರು ಮುಂದೆ ಬಂದರೆ ನಿಮಗೆ ಸಹಾಯ ಮಾಡಲು ಸಾದಾ ಸಿದ್ದ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಭೀಮನಗಡದ ಶಿವಶರಣ ಶ್ರೀ ಕಲ್ಲಿನಾಥ ಮಹಾಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಶ್ರೀ ಎಸ್,ಜಿ,ನಂಜಯ್ಯನಮಠ ಅವರು ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಶ್ರೀ ಯಮನಪ್ಪ ಭಜಂತ್ರಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ, ಮಹಾಂತಪ್ಪ ಭದ್ರಣ್ಣನವರ, ರೇವಣೆಪ್ಪ ರಾಮದುರ್ಗ , ಜಹಾಂಗೀರ್ ಜಾಗೀರದಾರ್,ರೋಮಣ್ಣ ಭಜಂತ್ರಿ ,ಬಸಪ್ಪ ಭಜಂತ್ರಿ, ಪ್ರಾಸ್ತಾವಿಕ ನುಡಿ ಶಿಕ್ಷಕ ಶ್ರೀ ತಮ್ಮಣ್ಣೆಪ್ಪ ಭಜಂತ್ರಿ, ಹೇಳಿದರು. ಸಮಾಜದ ಮುಖಂಡರಾದ ಬಸವಂತಪ್ಪ ಯರಗೇರಿ ವಿಜಯಶಂಕರ್ ಭಜಂತ್ರಿ, ಶರಣಪ್ಪ ಭಜಂತ್ರಿ, ಬೈಲಪ್ಪ ಭಜಂತ್ರಿ, ಹನಮಂತ ಭಜಂತ್ರಿ, ಹನಮಂತ ಹಿರೇಮನಿ, ಯಮನಪ್ಪ ಭಜಂತ್ರಿ ಅನೇಕರು ಉಪಸ್ಥಿತಿ ಇದ್ದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
Share This Article
error: Content is protected !!