ಗೋಕಾಕದ ಕಾಂಗ್ರೇಸ್ ಮುಖಂಡ ಡಾ ಮಹಾಂತೇಶ ಕಡಾಡಿಯವರ ಜನಸಂಪರ್ಕ ಕಾರ್ಯಾಲಯದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತ್ಯೋತ್ಸವ ನಿಮಿತ್ಯ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ನಂತರ ಮಾತನಾಡಿದ ಡಾ ಕಡಾಡಿಯವರು ಅಂಬೇಡ್ಕರ್ ಅವರಿಗೆ ಆದ ದೌರ್ಜನ್ಯ ಈ ದೇಶದಲ್ಲಿ ಯಾರಿಗೂ ಆಗಿಲ್ಲ. ಆ ಎಲ್ಲ ದೌರ್ಜನ್ಯವನ್ನು ಮೆಟ್ಟಿ ನಿಂತು ಯಾವುದೇ ರಾಗ ದ್ವೇಷವಿಲ್ಲದೇ ಸರ್ವರಿಗೂ ಒಳಿತಾಗುವ ದೃಷ್ಟಿಯಲ್ಲಿ ಸಂವಿಧಾನ ರಚಿಸಿದರು. ಅಂಬೇಡ್ಕರ್ ಅವರನ್ನು ನಾವು ದಿನಂಪ್ರತಿ ಸ್ಮರಿಸಬೇಕು. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ ಮಾಹಿತಿ ದೇಶದ ಪ್ರತಿಯೊಬ್ಬರಿಗೂ ತಲುಪಬೇಕು. ನಾವು ನೀವೆಲ್ಲರೂ ಯಾವುದೇ ಜಾತಿ, ಧರ್ಮ, ಭಾಷೆ, ಪಂಥ ಎನ್ನದೇ ಸರ್ವರೂ ನಮ್ಮವರು ಎಂಬ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.